ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ವಾರಂಬಳ್ಳಿಯ ಗ್ರಾಮೀಣ ಪ್ರತಿಭೆ ಲೋಹಿತ್ ಹಾಗೂ ಸೋಮಶೇಖರ್ ಆಯ್ಕೆ
ಹೊಸನಗರ : 2024-25ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಪುರುಷರ ಅಂತರ್ ವಿಶ್ವವಿದ್ಯಾಲಯದ ಬಾಲ್ ಬ್ಯಾಡ್ಮಿಂಟನ್ ಆಯ್ಕೆ ಪ್ರಕ್ರಿಯೆಯು ಮೇ 23ರಂದು ನಡೆದಿದ್ದು, ಮೇ 31 ರಿಂದ ಜೂನ್ 3ರವರೆಗೆ ಚೆನ್ನೈನ ಜಪ್ಪಿಯಾರ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೊಸನಗರ ತಾಲ್ಲೂಕಿನ ಗ್ರಾಮೀಣ ಪ್ರತಿಭೆಗಳಾದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿಗಳಾದ ಆರ್. ಲೋಹಿತ್ ಹಾಗೂ ಎಸ್. ಸೋಮಶೇಖರ್ ಆಯ್ಕೆಯಾಗುವ ಮೂಲಕ ಹೊಸನಗರ ತಾಲ್ಲೂಕಿನ ಕ್ರೀಡಾ ಕ್ಷೇತ್ರದಲ್ಲಿ ಹೊಸ ಮಿಂಚು ಮೂಡಿಸಿದ್ದಾರೆ.
ಇಂಟರ್ ಯೂನಿವರ್ಸಿಟಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಡಲು ಚೆನ್ನೈಗೆ ತೆರಳಲಿರುವ ಆರ್. ಲೋಹಿತ್ ಹಾಗೂ ಎಸ್. ಸೋಮಶೇಖರ್ ಅವರಿಗೆ ಕಾಲೇಜಿನ ಪ್ರಾಚಾರ್ಯರಾದ ಡಾ ಕೆ. ಉಮೇಶ್, ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ಹಾಗೂ ಅಧ್ಯಾಪಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಆರ್. ಲೋಹಿತ್ ಹೊಸನಗರ ತಾಲ್ಲೂಕು ವಾರಂಬಳ್ಳಿ ಗ್ರಾಮದ ರೊಕ್ಕಪ್ಪ ಹಾಗೂ ಲೀಲಾವತಿಯವರ ಪುತ್ರನಾಗಿದ್ದು, ಎಸ್. ಸೋಮಶೇಖರ ಇದೇ ಗ್ರಾಮದ ಸುರೇಶ್ ಹಾಗೂ ನೀಲಾವತಿಯವರ ಪುತ್ರನಾಗಿರುತ್ತಾನೆ.
ಕಾಮೆಂಟ್‌ಗಳಿಲ್ಲ