Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದ ಟೆಡ್ಡಿ ವೈಬ್ಸ್‌ ಯುವ ಸಮೂಹದಿಂದ ಮತದಾನ ಜಾಗೃತಿ ಅಭಿಯಾನ - ಪಿಂಕ್‌ ಕಲರ್‌ ಟೆಡ್ಡಿ ವೇಷಧಾರಿ ಮೂಲಕ ಮತದಾನಕ್ಕೆ ಪ್ರೇರೇಪಿಸುತ್ತಿರುವ ಹೊಸನಗರದ ಯುವಜನರು

ಹೊಸನಗರ : ಮತದಾನ ಮಾಡಲು ಹತ್ತು ಹಲವು ಬಗೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಲೇ ಇರುತ್ತದೆ. ಈಗ ಹೊಸನಗರ ಪಟ್ಟಣದ ಯುವ ಸಮೂಹವೊಂದು ಪಿಂಕ್ ಕಲರ‍್ರಿನ ಟೆಡ್ಡಿ ಬೇರ್‌ನೊಂದಿಗೆ ಪಟ್ಟಣದೆಲ್ಲೆಡೆ ತಿರುಗಿ ಮತದಾನ ಮಾಡಿ, ಈ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಬಲಗೊಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಸದ್ದಿಲ್ಲದೆ ತನ್ನನ್ನು ತೊಡಗಿಸಿಕೊಂಡಿದೆ.

ಹೌದು, ಹೊಸನಗರ ಪಟ್ಟಣದ ಯುವಸಮೂಹವೊಂದು ’ಟೆಡ್ಡಿ ವೈಬ್ಸ್‌’ ಹೆಸರಿನಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಪಿಂಕ್‌ ಕಲರ‍್ರಿನ ಟೆಡ್ಡಿ ಬೇರ್‌ ವೇಷ ತೊಡಿಸಿ, ಟೆಡ್ಡಿ ಬೇರ್‌ ಮೂಲಕ ಮತದಾರರಿಗೆ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಜಾಗೃತಿ ಅಭಿಯಾನದ ಅಂಗವಾಗಿ ಇಂದು ಟೆಡ್ಡಿ ವೈಬ್ಸಿನ ಪಿಂಕ್‌ ಕಲರ‍್ರಿನ ಟೆಡ್ಡಿ ಬೇರ್‌ ವೇಷಧಾರಿ ’ನಮ್ಮ ಮತ ನಮ್ಮ ಭಾರತದ ಭವಿಷ್ಯ - ಮತದಾನದಲ್ಲಿ ಭಾಗವಹಿಸೋಣ, ಪ್ರಜಾಪ್ರಭುತ್ವವನ್ನು ಬಲ ಪಡಿಸೋಣ’ ಎಂಬ ಘೋಷಣೆಯುಳ್ಳ ಭಿತ್ತಿಪತ್ರವನ್ನು ಹಿಡಿದುಕೊಂಡು ಹೊಸನಗರದ ಬಸ್‌ ಸ್ಟ್ಯಾಂಡ್‌, ಮಾರುಕಟ್ಟೆ ಪ್ರದೇಶ ಸೇರಿದಂತೆ ಪಟ್ಟಣದ ಪ್ರಮುಖ ಗಲ್ಲಿಗಳಲ್ಲಿ ತಿರುಗಿ ಮತದಾನಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು. ಪಿಂಕ್‌ ಕಲರ‍್ರಿನ ಟೆಡ್ಡಿ ಬೇರ್‌ ಮತದಾನ ಮಾಡುವಂತೆ ಹೇಳುತ್ತಿರುವುದನ್ನು ಕಂಡ ಜನರು, ಅದರಲ್ಲೂ ಯುವ ಜನರು ಟೆಡ್ಡಿಯ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 

ಹೊಸನಗರ ಸರ್ಕಾರಿ ಆಸ್ಪತ್ರೆಗೆ ನೇಮಕಗೊಂಡ ಮೂವರು ವೈದ್ಯರಿಗೆ ಸಂಬಳ ಇಲ್ಲಿ! ಕರ್ತವ್ಯ ಮಾತ್ರ ಸಾಗರ - ಶಿವಮೊಗ್ಗ ಆಸ್ಪತ್ರೆಯಲ್ಲಿ!? ಇದೇನಿದು ಹೊಸನಗರ ಸರ್ಕಾರಿ ಆಸ್ಪತ್ರೆಯ ಕಥೆ - ವ್ಯಥೆ!!

ಸದ್ದಿಲ್ಲದೆ ನಡೆಯುತ್ತಿರುವ ಈ ಅಭಿಯಾನದ ಕುರಿತು ಪಟ್ಟಣದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸುಧೀಂದ್ರ ಪಂಡಿತ್‌ ಅವರು, ಟೆಡ್ಡಿ ವೈಬ್ಸ್‌ ಉತ್ತಮ ಕೆಲಸವನ್ನು ಮಾಡುತ್ತಿದ್ದು, ಈ ಮೂಲಕ ನಾಡಿದ್ದು ಏಳನೇ ತಾರೀಖು ನಡೆಯುವ ಚುನಾವಣಾ ಮತದಾನದಲ್ಲಿ ಜನರನ್ನು ಭಾಗವಹಿಸುವಂತೆ ಪ್ರೇರೇಪಿಸಿ ಪ್ರಜಾಪ್ರಭುತ್ವವನ್ನು ಬಲ ಪಡಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಈ ತಂಡಕ್ಕೆ ಹೊಸನಗರದ ಜನರೆಲ್ಲರ ಪರವಾಗಿ ಧನ್ಯವಾದಗಳು ಎಂದು ಹೊಸನಗರ ಯುವ ತಂಡದ ಕೆಲಸವನ್ನು ಮೆಚ್ಚಿಕೊಂಡರು.

ಮತದಾನ ನಮ್ಮ ಹಕ್ಕು ಮತ್ತು ಅದನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಮ್ಮ ಜನಪ್ರತಿನಿಧಿ ಹೇಗಿರಬೇಕು ಮತ್ತು ಹೇಗಿರಬಾರದು ಎನ್ನುವುದನ್ನೂ ನಾವು ನಿರ್ಧರಿಸಬಹುದು, ಈ ಮೂಲಕ ನಮ್ಮ ಭಾರತದ ಮೂಲಸೆಲೆಯಾದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು ಎನ್ನುವುದನ್ನು ಮತದಾರರಿಗೆ ತಿಳಿಸಿ ಹೇಳುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಇದನ್ನರಿತು ಟೆಡ್ಡಿ ವೈಬ್ಸ್‌ ಯುವ ಸಮೂಹ ಮಾಡುತ್ತಿರುವ ಕೆಲಸ ನಿಜಕ್ಕೂ ಮೆಚ್ಚುಗೆಗೆ ಅರ್ಹವಾದದ್ದು ಮತ್ತು ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಈ ತಂಡ ನೀಡುತ್ತಿರುವ ಕೊಡುಗೆ ಸಣ್ಣದಾದರೂ ಅದು ತುಂಬಾ ಮಹತ್ವವಾದದ್ದಾಗಿದೆ.

ಕಾಮೆಂಟ್‌ಗಳಿಲ್ಲ