Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಸರ್ಕಾರಿ ಆಸ್ಪತ್ರೆಗೆ ನೇಮಕಗೊಂಡ ಮೂವರು ವೈದ್ಯರಿಗೆ ಸಂಬಳ ಇಲ್ಲಿ! ಕರ್ತವ್ಯ ಮಾತ್ರ ಸಾಗರ - ಶಿವಮೊಗ್ಗ ಆಸ್ಪತ್ರೆಯಲ್ಲಿ!? ಇದೇನಿದು ಹೊಸನಗರ ಸರ್ಕಾರಿ ಆಸ್ಪತ್ರೆಯ ಕಥೆ - ವ್ಯಥೆ!!

ಹೊಸನಗರ : ನೂರು ಹಾಸಿಗೆ ಸಾಮರ್ಥ್ಯದ ಹಾಸಿಗೆ ಎನ್ನುವ ಹಣೆಪಟ್ಟಿ ಹಚ್ಚಿಕೊಂಡಿದ್ದೊಂದು ಬಿಟ್ಟರೆ ಹೊಸನಗರದ ಸಾರ್ವಜನಿಕ ಆಸ್ಪತ್ರೆ ಯಾವತ್ತು ಕೂಡಾ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ಹೊಂದಿದ ಉದಾಹರಣೆಯೇ ಇಲ್ಲ ಎಂದು ತಾಲ್ಲೂಕಿನ ನಾಗರೀಕರು ಬೇಸರದಿಂದ ಹೇಳುವುದು ಸಾಮಾನ್ಯವಾಗಿ ಹೋಗಿದೆ. ಯಾಕೆಂದರೆ, ಈ ಆಸ್ಪತ್ರೆ ಪಟ್ಟಣಕ್ಕೆ ಮಂಜೂರಾದ ದಿನದಿಂದ ಇಂದಿನವರೆಗೂ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದೆ. ಒಂದಿದ್ದರೆ ಇನ್ನೊಂದಿಲ್ಲ ಎನ್ನುವುದು ಈ ಆಸ್ಪತ್ರೆಯ ಮಾಮೂಲು ಕಥೆಯಾಗಿಬಿಟ್ಟಿದೆ. ನೋಡುತ್ತಾ ಹೋದರೆ ಈ ಆಸ್ಪತ್ರೆಯ ಸಮಸ್ಯೆಗಳು 108. ಇನ್ನು ಈ ಸರ್ಕಾರಿ ಆಸ್ಪತ್ರೆಯಲ್ಲಿರುವ ವಾಹನದ ಸಮಸ್ಯೆ 108ಕ್ಕಿಂತಲೂ ಜಾಸ್ತಿ!

ಹೊಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರವೇ ಇಲ್ಲ. ಈ ಬಗ್ಗೆ ಈಗಾಗಲೇ ಸಾರ್ವಜನಿಕರು ಹಲವು ಬಾರಿ ದೂರು ನೀಡಿದರೂ ಈವರೆಗೂ ಜನೌಷಧಿ ಕೇಂದ್ರದ ಬಾಗಿಲು ತೆಗೆದೇ ಇಲ್ಲ. ಇಲ್ಲಿರುವ ನಾಲ್ವರು ವೈದ್ಯರಲ್ಲಿ ಯಾರಿಗೂ ಬಿಡುವೇ ಇಲ್ಲ. ಒಬ್ಬರು ಸರ್ಜನ್, ಒಬ್ಬರು  ಅರಿವಳಿಕೆ ತಜ್ಞರು. ಇನ್ನೊಬ್ಬರು ಮಕ್ಕಳ ತಜ್ಞರು, ಇನ್ನೊಬ್ಬರು... ಈ ನಾಲ್ವರು ಮಾತ್ರ ಹೊಸನಗರದ ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ, ಕೂಲಿ ಕೃಷಿ ಕಾರ್ಮಿಕರೇ ಹೆಚ್ಚಾಗಿರುವ ತಾಲ್ಲೂಕಿನ ಜನರು ಹೆಚ್ಚಿನ ವೈದ್ಯಕೀಯ ಸೇವೆಗಾಗಿ ಸಾಗರ, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಮಣಿಪಾಲಗಳಿಗೆ ತೆರಳುವ ಅನಿವಾರ್ಯತೆ ಏರ್ಪಟ್ಟಿದೆ.

ಜಯನಗರ ಪಂಚಾಯ್ತಿ ವ್ಯಾಪ್ತಿಯ ಟೆಂಕಬೈಲಿನ ಕಾಂಗ್ರೆಸ್‌ ನಾಯಕನ ಕ್ರಷರ್ ಘಟಕದಲ್ಲಿ ಸಾಲು ಸಾಲು ಅಕ್ರಮ - ಸಂಕಷ್ಟದಲ್ಲಿ ಸ್ಥಳೀಯರು - ಅಕ್ರಮ ಕಂಡರೂ ಆಮೆ ಏರಿ ಕುಳಿತರೇ ಅಧಿಕಾರಿಗಳು?!

ಗುತ್ತಿಗೆ ಆಧಾರದ ಮೇಲೆ ಪ್ರಸೂತಿ ತಜ್ಞರಾದ ಡಾ. ಶರ್ಮಿತ ಹಾಗೂ ಕೀಲು ಮೂಳೆ ತಜ್ಞ ಡಾ. ರಾಹುಲ್ ಹೊಸನಗರ ಆಸ್ಪತ್ರೆಗೆ ನೇಮಕಗೊಂಡಿದ್ದೇನೋ ನಿಜ. ದಾಖಲೆಗಳು ಕೂಡಾ ಇದನ್ನೇ ಹೇಳುತ್ತಿವೆ. ಆದರೆ ಅವರು ಈಗ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಬಳ ಪಡೆಯಲು ಮಾತ್ರ ಹೊಸನಗರ ಆಸ್ಪತ್ರೆಗೆ ಬರುತ್ತಿದ್ದಾರೆ ಎನ್ನುತ್ತವೆ ಆಸ್ಪತ್ರೆಯ ಮೂಲಗಳು. ನೇತ್ರ ತಜ್ಞರಾದ ಡಾ. ಶಂಶಾದ್ ಬೇಗಂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೂ ಕೂಡಾ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತೆ ಸಂಬಳ ಆಗುತ್ತಿದೆ ಎನ್ನಲಾಗುತ್ತಿದೆ. ಅಂದರೆ ಈ ಸಿಬ್ಬಂದಿಗಳು ದಾಖಲೆ ಪ್ರಕಾರ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿದ್ದಾರೆ. ಆದರೆ ಇವರ ಕರ್ತವ್ಯ ಮಾತ್ರ ಸಾಗರ ಹಾಗೂ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದುವರಿದಿದೆ! ಇದು ಹೇಗೆ ಮತ್ತು ಯಾಕೆ ಎಂದು ಕೇಳಬೇಕಾದವರು ಈವರೆಗೂ ಯಾಕೆ ಕೇಳಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಆದ್ದರಿಂದ ತಕ್ಷಣವೇ ಈ ಭಾಗದ ಶಾಸಕರು, ಲೋಕಸಭಾ ಸದಸ್ಯರು ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದು, ಕೂಡಲೇ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ವೈದ್ಯರನ್ನು ನೇಮಕ ಮಾಡುವ ಮೂಲಕ ಆಸ್ಪತ್ರೆಗೆ ಕಾಯಕಲ್ಪ ಕಲ್ಪಿಸಬೇಕೆಂದು ಹೊಸನಗರ ತಾಲ್ಲೂಕಿನ ಜನರು ಆಗ್ರಹಿಸಿದ್ದಾರೆ

ಕಾಮೆಂಟ್‌ಗಳಿಲ್ಲ