Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಂಬುಜ ಶ್ರೀ ಜೈನ ಮಠದಲ್ಲಿ ಕ್ರೋಧಿನಾಮ ಸಂವತ್ಸರ ಪಂಚಾಂಗ ಶ್ರವಣ

ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಜೈನ ಮಠದಲ್ಲಿ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ನಿನ್ನೆ ಪ್ರಾತಃಕಾಲ ಜಿನದೇವರ ಶ್ರೀಮುಖ ದರ್ಶನವನ್ನು ಭಕ್ತರು ಭಕ್ತಿಭಾವದಿಂದ ಪಡೆದರು. ಶ್ರೀ ಕ್ರೋಧಿನಾಮ ಸಂವತ್ಸರದ ಆರಂಭದ ಶುಭದಿನ ಯುಗಾದಿ ಪಾಡ್ಯವಾಗಿದ್ದು ವಿಶೇಷ ಅಲಂಕಾರ ಪೂಜೆ, ಅಷ್ಟವಿಧಾರ್ಚನೆ ವಿಧಿ-ವಿಧಾನಗಳು ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿನಾಗಮೋಕ್ತ ಪರಂಪರಾಗತ ಪದ್ಧತಿಯಲ್ಲಿ ಪೂಜಾ ವಿಧಾನಗಳು ನೆರವೇರಿದವು. ಮಂಗಳವಾದ್ಯ, ಪುರೋಹಿತರಿಂದ ಮಂತ್ರಪಠಣ, ಭಕ್ತರಿಂದ ನಿತ್ಯ ಸ್ತೋತ್ರ ಪಠಣ ಸಾಂಗವಾಗಿ ನಡೆಯಿತು.

ಗೋಧೂಳಿ ಮುಹೂರ್ತದಲ್ಲಿ ಶ್ರೀ ಪಂಚಾಗ ಶ್ರವಣ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳು, ಜೈನ ಧರ್ಮದನ್ವಯ ಜ್ಯೋತಿಷ್ಯ ಶಾಸ್ತ್ರದ ಪಂಚಾಂಗವು ಸರ್ವರ ಜೀವನವನ್ನು ಸಂಕಷ್ಟದಿಂದ ದೂರವಿಡಲು ಸಕಾರಾತ್ಮಕ ಮಾರ್ಗದರ್ಶಕ ಎಂದು ವಿವರಿಸುತ್ತಾ, ನಿತ್ಯ ಜೀವನದಲ್ಲಿ ಸಾತ್ವಿಕ ಧರ್ಮ ಪಾಲನೆಯಿಂದ ಶಿಕ್ಷಣ, ಕೃಷಿ, ಉದ್ಯಮ, ವಾಣಿಜ್ಯ, ವೈದ್ಯಕೀಯ ತಂತ್ರಜ್ಞಾನದ ಸಂಶೋಧನೆಗೆ ಪಂಚಾಂಗವು ನಾಂದಿ ಎಂದು ತಿಳಿಸಿದರು. ಸರ್ವರಿಗೂ ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಶಾಂತಿ-ನೆಮ್ಮದಿ ಆರೋಗ್ಯ ವರ್ಧಿಸಲಿ ಎಂದು ಹರಸಿದರು.

ಕ್ರೋಧವನ್ನು ತ್ಯಜಿಸಿ ಪೂಜೆ, ತಪ, ಸ್ವಾಧ್ಯಾಯಗಳಿಂದ ಸಂವತ್ಸರದಲ್ಲಿ ಶುಭ ಕಾರ್ಯಗಳು ನೆರವೇರಲಿ, ರಾಷ್ಟ್ರ ಸಮೃದ್ಧಿಯಾಗಲಿ ಎಂದು ಹರಸಿದರು. ಪುರೋಹಿತರಾದ ಶ್ರೀ ಪದ್ಮರಾಜ ಇಂದ್ರ, ಭರತ ಇಂದ್ರ, ಹೊಂಬುಜ ಜೈನ ಸಮಾಜ, ಮಹಿಳಾ ಸಮಾಜ, ಆಗಮಿಸಿದ ಭಕ್ತರು ಶ್ರೀಗಳಿಂದ ಶ್ರೀ ಮಂತ್ರಾಕ್ಷತೆ ಸ್ವೀಕರಿಸಿದರು.


ಕಾಮೆಂಟ್‌ಗಳಿಲ್ಲ