ದ್ವಿತೀಯ ಪಿ.ಯು.ಸಿ ಫಲಿತಾಂಶ - ಹೊಸನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಧನುಶಾ, ಸಂಜಯ ಮತ್ತು ಮಿಥುನ್ ಟಾಪರ್
ಹೊಸನಗರ : ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಹೊಸನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ವಿಜ್ಞಾನ ವಿಭಾಗದ ಧನುಶಾ 562, ವಾಣಿಜ್ಯ ವಿಭಾಗದ ಸಂಜಯ 580 ಮತ್ತು ಕಲಾ ವಿಭಾಗದ ಮಿಥುನ್ 578 ಅಂಕ ಗಳಿಸುವುದರೊಂದಿಗೆ ಕಾಲೇಜಿನ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಮೂರು ವಿಭಾಗದಿಂದ ಈ ಬಾರಿ 376 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 354 ವಿದ್ಯಾರ್ಥಿಗಳು ಪಾಸ್ ಆಗುವುದರೊಂದಿಗೆ ಶೇಕಡಾ 94.14 ಫಲಿತಾಂಶವನ್ನು ಹೊಸನಗರ ಸರ್ಕಾರಿ ಪದವಿಪೂರ್ವ ಕಾಲೇಜು ದಾಖಲಿಸಿದೆ.
ಈ ಬಾರಿಯ ಫಲಿತಾಂಶದಲ್ಲಿ ಕಾಲೇಜಿನ 51 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು 251 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಭಾಗವಾರು ಕಲಾ ವಿಭಾಗದಲ್ಲಿ ಶೇ. 89.18, ವಾಣಿಜ್ಯ ವಿಭಾಗದಲ್ಲಿ ಶೇ. 97.91 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. 96.43 ಫಲಿಶಾಂಶ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ