Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಾಳೆ ಹೊಸನಗರದಲ್ಲಿ ಕರೆಂಟ್ ಇರುವುದಿಲ್ಲ

ಹೊಸನಗರ : ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ಹಾಗೂ 33 ಕೆವಿ ವಿದ್ಯುತ್‌ ಲೇನಿನ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಏಪ್ರಿಲ್ 5ರ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪ್ರಸರಣದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸಾಗರ - ಹೊಸನಗರ ಮಾರ್ಗ ನಿರ್ವಹಣೆ ಹಾಗೂ ಉಪ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣೆ ಪ್ರಯುಕ್ತ ಸಾಗರ ಹೊಸನಗರ ವಿದ್ಯುತ್ ಮಾರ್ಗದ ಜೇನಿ, ಮಾರುತೀಪುರ, ರಾಮಚಂದ್ರಪುರ, ಮೇಲಿನಬೆಸಿಗೆ, ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಸರಣದಲ್ಲಿ ಅಡಚಣೆ ಉಂಟಾಗಲಿದೆ. ಈ ಸಂಬಂಧ ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ಹೊಸನಗರ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.


ಕಾಮೆಂಟ್‌ಗಳಿಲ್ಲ