ಹೊಸನಗರ ತಾಲ್ಲೂಕಿನಲ್ಲಿ ತಗ್ಗದ ವರುಣನ ಆರ್ಭಟ - ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ ಮಳೆ ದಾಖಲು - ಶಾಲಾ ಕಾಲೇಜುಗಳಿಗೆ ರಜೆ
ಹೊಸನಗರ : ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನಲ್ಲೇ ಅತ್ಯಧಿಕ ಪ್ರಮಾಣದ 130 ಮಿಲಿ ಮೀಟರ್ ಮಳೆ ದಾಖಲಾಗಿದೆ.
ತಾಲ್ಲೂಕಿನ ಹುಲಿಕಲ್ಲಿನಲ್ಲಿ 113 ಮಿ.ಮೀ, ಸಾವೇಹಕ್ಕಲಿನಲ್ಲಿ 105 ಮಿ.ಮೀ, ಬಿದನೂರು ನಗರದಲ್ಲಿ 108 ಮಿ.ಮೀ, ಮಾಣಿಯಲ್ಲಿ 74 ಮಿ.ಮೀ, ಯಡೂರಿನಲ್ಲಿ 70 ಮಿ.ಮೀ, ಹೊಸನಗರ ಪಟ್ಟಣದಲ್ಲಿ 65 ಮಿ.ಮೀ ಮಳೆ ದಾಖಲಾಗಿದೆ. ಲಿಂಗನಮಕ್ಕಿಯಲ್ಲಿ 56 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ. 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1789.45 ಅಡಿ ತಲುಪಿದ್ದು, ಜಲಾಶಯಕ್ಕೆ 41036 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ 1760.10 ಅಡಿ ದಾಖಲಾಗಿತ್ತು.
ಮಲೆನಾಡಿನಲ್ಲಿ ಆರಿದ್ರ ಮಳೆಯ ಆರ್ಭಟ ಮುಂದುವರೆದಿರುವ ಕಾರಣ ಇಂದು ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಾಮೆಂಟ್‌ಗಳಿಲ್ಲ