ಹೊಂಬುಜ ತ್ರಿಕೂಟ ಜಿನಾಲಯದ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಮಹಾಭಿಷೇಕ-ಸಂಘ ಪೂಜೆ
ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜದ ವಾರ್ಷಿಕ ರಥೋತ್ಸವದ ಐದನೇಯ ದಿನದಂದು ತ್ರಿಕೂಟ ಜಿನಮಂದಿರದಲ್ಲಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ಶಾಂತಿನಾಥ ಸ್ವಾಮಿ, ಶ್ರೀ ಬಾಹುಬಲಿ ಸ್ವಾಮಿ ಏಕಶಿಲಾ ವಿಗ್ರಹಗಳಿಗೆ 108 ಕಲಶಗಳ ಮಹಾಭೀಷೇಕವನ್ನು ಭಕ್ತಾಧಿಗಳು ನೆರವೇರಿಸಿದರು.
ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಕಂಬದಹಳ್ಳಿ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ನಿತ್ಯವಿಧಿ ಸಹಿತ, ಗುಡ್ಡದ ಬಸದಿ (ತ್ರಿಕೂಟ ಜಿನಾಲಯ) ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಆಗಮೋಕ್ತ ಶಾಸ್ತ್ರದನ್ವಯ ಮಹಾಭೀಷೇಕ ಮಾಡಲಾಯಿತು. ಶ್ರೀ ಧರಣೇಂದ್ರ ಯಕ್ಷ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂಜಾ ವಿಧಿ ನಡೆಯಿತು.
ಶ್ರೀ ಪಾರ್ಶ್ವನಾಥ ಸ್ವಾಮಿಯ ಅನುಗ್ರಹದಿಂದ ಸದಾ ಭಕ್ತರಿಗೆ ವಿಘ್ನ-ಸಂಕಷ್ಟಗಳು ದೂರವಾಗಲಿ ಮತ್ತು ಜೀವನದಲ್ಲಿ ಜಿನಧರ್ಮ ಪಥವು ಆರೋಗ್ಯದಾಯಕವಾಗಿರಲಿ ಎಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು. ಸೇವಾಕರ್ತರಾದ ಬೆಂಗಳೂರಿನ ಶ್ರೀಮತಿ ರೂಪಲ್ ಜೈನ್, ಶ್ರೀ ರಜನೀಶ್ ಜೈನ್ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡರು. ಹುಬ್ಬಳ್ಳಿ, ಕೊಪ್ಪಳ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ವಯನಾಡ್, ಮಂಗಳೂರು-ಉಡುಪಿ ಜಿಲ್ಲಾ ಜೈನ ಸಮಾಜದವರು ಭಾಗಿಗಳಾದರು.
ಮಹಾರಥೋತ್ಸವದಂದು ಸಂಜೆ 09 ಕ್ಕೆ ಯಕ್ಷಗಾನ ತಾಳಮದ್ದಳೆ ಯಶೋಧರ ಚರಿತ್ರೆ-ಪದ್ಮಾವತಿ ಮಹಾತ್ಮೆ ಪ್ರಸಂಗವನ್ನು ಹೆಬ್ರಿಯ ಚಾರದ ಶ್ರೀ ಮಹಿಷಮರ್ಧಿನಿ ಯಕ್ಷ ಕಲಾ ಪ್ರತಿಷ್ಠಾನದ ಕಲಾವಿದರು ಪ್ರಸ್ತುತ ಪಡಿಸಿದರು.
ಕಾಮೆಂಟ್‌ಗಳಿಲ್ಲ