ಹೊಸನಗರ ಪಟ್ಟಣ ಕಾಂಗ್ರೆಸ್ ಕಚೇರಿ ಗಾಂಧಿ ಮಂದಿರ ಮುಂಭಾಗದಲ್ಲಿ ಬಿಜೆಪಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶ
ಹೊಸನಗರ : ಹೊಸನಗರ ತಾಲ್ಲೂಕು ಭಾರತೀಯ ಜನತಾ ಪಕ್ಷದ ಬೂತ್ ಕಾರ್ಯಕರ್ತರ ಪದಗ್ರಹಣ ಸಮಾರಂಭ ಇಂದು ಸಂಜೆ ತಾಲ್ಲೂಕು ಕಾಂಗ್ರೆಸ್ ಕಚೇರಿಯಾದ ಗಾಂಧಿ ಮಂದಿರ ಮುಂಭಾಗದಲ್ಲಿ ರಚಿಸಿದ ವೇದಿಕೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಕೆ.ವಿ. ಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕರು, ಹಿರಿಯ ಮುತ್ಸದ್ದಿಗಳಾದ ಬಿ. ಸ್ವಾಮಿರಾವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಉಮೇಶ್ ಕಂಚುಗಾರ್, ಕೆ.ಎಸ್. ಪ್ರಶಾಂತ್, ಎನ್. ಆರ್. ದೇವಾನಂದ, ಎಂ. ಎನ್. ಸುಧಾಕರ್, ಸುರೇಶ್ ಸ್ವಾಮಿರಾವ್, ಆಲುವಳ್ಳಿ ವೀರೇಶ್, ಮಹೇಶ್ ಚಿಕ್ಕಮಣತಿ, ಯುವರಾಜ್, ಬೆಳ್ಳೂರು ತಿಮ್ಮಪ್ಪ, ಎ.ವಿ. ಮಲ್ಲಿಕಾರ್ಜುನ, ಆರ್. ಟಿ. ಗೋಪಾಲ್, ಹೆಚ್. ಎನ್. ಶ್ರೀಪತಿರಾವ್, ಶ್ರೀಮತಿ ಸುಮಾ, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ನಾಗರತ್ನ ದೇವರಾಜ್, ಎ.ಟಿ. ನಾಗರತ್ನ, ಲೀಲಾ ಶಂಕರ್, ಪದ್ಮ ಸುರೇಶ್, ಜೆಡಿಎಸ್ ಮುಖಂಡ ಎನ್. ವರ್ತೇಶ್, ಎಂ. ವಿ. ಜಯರಾಮ್, ಸಮತಿ ಪೂಜಾರಿ ಮೊದಲಾದ ಗಣ್ಯರು ವೇದಿಕೆಯನ್ನು ಅಲಂಕರಿಸಿದ್ದರು.
ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಬೆಳಗೋಡು ಗಣಪತಿ ಸ್ವಾಗತಿಸಿದರು. ಎಂ.ಎನ್. ಸುಧಾಕರ್, ಕೆ. ವಿ. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ