Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ಏಪ್ರಿಲ್ 1 ರಿಂದ 3 - 9 ನೇ ತರಗತಿ ಶಾಲಾ ಮಕ್ಕಳಿಗೆ ವ್ಯಕ್ತಿತ್ವ ವರ್ಧನ ಶಿಬಿರ

ಹೊಸನಗರ : ಬೇಸಿಗೆಯ ಬಿಸಿಲಿನ ಸೂರ್ಯ ತಾಪದಲ್ಲೂ ಮನಸ್ಸಿಗೆ ತಂಪಾಗುವ ಮೌಲ್ಯಾಧಾರಿತ ಚಟುವಟಿಕೆಗಳ ಕಲಿಕೆಯಲ್ಲಿ ತೊಡಗುವಂತಾಗಲಿ ಎನ್ನುವ ಉದ್ದೇಶದಿಂದ ಹೊಸನಗರದ ಸ್ವಾಮಿ ವಿವೇಕಾನಂದ ಯೋಗ ಕೇಂದ್ರದಲ್ಲಿ 3 ನೇ ತರಗತಿಯಿಂದ 9 ನೇ ತರಗತಿಯ ಶಾಲಾ ಮಕ್ಕಳಿಗೆ ವ್ಯಕ್ತಿತ್ವ ವರ್ಧನ ಶಿಬಿರವನ್ನು ಆಯೋಜಿಸಲಾಗಿದೆ.

ವಿಭಿನ್ನ, ವಿಶೇಷ ರೀತಿಯಲ್ಲಿ ಡ್ರಾಯಿಂಗ್, ಕ್ರಾಫ್ಟ್, ಕ್ಲೇ ಮಾಡಲಿಂಗ್, ಮೆಮೋರಿ ಗೇಮ್ಸ್, ಪನ್ನಿ ಗೇಮ್ಸ್, ನೃತ್ಯ, ಹಾಡು, ಕಥೆ, ಯೋಗ, ಪ್ರಾಣಾಯಾಮ, ಧ್ಯಾನ, ಸೂರ್ಯ ನಮಸ್ಕಾರ, Importence of RWR  ಇನ್ನೂ ಮುಂತಾದ ಏಕಾಗ್ರತೆಯನ್ನು ಬಿಂಬಿಸುವ ತರಬೇತಿಗಳನ್ನು ನುರಿತ ತರಬೇತುದಾರರು ನೀಡಲಿದ್ದಾರೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲರಿಗೂ ಅನುಕೂಲವಾಗುವಂತೆ ಬಹಳ ಕಡಿಮೆ ಮೊತ್ತದ ಶಿಬಿರ ಶುಲ್ಕವಿದ್ದು, ಸೀಮಿತ ಪ್ರವೇಶಾವಕಾಶವಿರುತ್ತದೆ. ದಿನಾಂಕ: 01: 04: 2024 ರಿಂದ 09:04:2024 ರವರೆಗೆ, ಪ್ರತೀದಿನ ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 12-30 ರವರಿಗೆ ಶಿಬಿರ ನಡೆಯಲಿದೆ. ಸ್ಥಳ: ಸ್ವಾಮಿ ವಿವೇಕಾನಂದ ಯೋಗಕೆಂದ್ರ, ಶಿವಶಕ್ತಿ ಕಾಂಪ್ಲೆಕ್ಸ್, ಶ್ರೀ ರಾಮ ಕಲ್ಯಾಣ ಮಂದಿರ ಸಮೀಪ, ಶಿವಮೊಗ್ಗ ರಸ್ತೆ, ಹೊಸನಗರ. ವಿಶೇಷ ಸೂಚನೆ : ಯೋಗ ಕೆಂದ್ರದಲ್ಲಿ ಬೆಳಿಗ್ಗೆ 5-45 ರಿಂದ 6-45 ರವರೆಗೆ, ಪುರುಷ ಮತ್ತು ಮಹಿಳೆಯರಿಗೆ ದೈನಂದಿನ ಆರೋಗ್ಯ ಮತ್ತು ಕ್ರಿಯಾಶೀಲ ಚಟುವಟಿಕೆಗಳಿಗೆ ಪೂರಕವಾಗಿ ಯೋಗ ಕ್ಲಾಸ್ ನಡೆದುಕೊಂಡು ಬರುತ್ತಿದೆ. ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ಶನಿವಾರ ಮತ್ತು ಭಾನುವಾರ ಈ ಕೇಂದ್ರದಲ್ಲಿ ಡ್ರಾಯಿಂಗ್, ಕ್ರಾಫ್ಟ್, ಮತ್ತು ಯಕ್ಷಗಾನ ಕ್ಲಾಸ್‌‌ಗಳು ನಡೆಯುತ್ತಿದೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರು, ಸ್ವಾಮಿ ವಿವೇಕಾನಂದ ಯೋಗಕೆಂದ್ರ ಇವರನ್ನು ಈ ಮುಂದಿನ ನಂಬರ‍್ರುಗಳಲ್ಲಿ 990098870, 8317358618, 7259942894 ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌ಗಳಿಲ್ಲ