Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೆಬ್ಬಿಗೆ ತೂಗು ಸೇತುವೆ ದುರಸ್ತಿಗೆ 30 ಲಕ್ಷ ಅನುದಾನ

ಹೊಸನಗರ : ನೂತನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ನಿಟ್ಟೂರು ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ಹೇಳಿದರು.

ಅವರು ನಿಟ್ಟೂರಿನ ವೀರಭದ್ರ ದೇವಸ್ಥಾನ ರಸ್ತೆ ಕಾಮಗಾರಿಗೆ ಮಂಗಳವಾರ ನಡೆದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಸ್ತುತ ರಸ್ತೆಗೆ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ಮಂಜೂರಾಗಿದೆ. ಹಾಲ್ಮನೆ ಹಳ್ಳಕ್ಕೆ ಕಾಲುಸಂಕ ನಿರ್ಮಾಣ, ಬಗ್ಗಿ ಜಡ್ಡುರಸ್ತೆ ದುರಸ್ತಿಗೆ 15 ಲಕ್ಷ, ಜಾಲ ಬೈದೂರು ರಸ್ತೆಗೆ 20 ಲಕ್ಷ, ಕರ್ಕಮಡಿ ರಸ್ತೆಗೆ 15 ಲಕ್ಷ, ಮಾವಿನಗುಡ್ಡ ಶಾಲಾ ದುರಸ್ತಿಗೆ 13 ಲಕ್ಷ, ಆಸ್ಪತ್ರೆ ದುರಸ್ತಿಗಾಗಿ 4 ಲಕ್ಷರೂ. ಅನುದಾನ ಬಿಡುಗಡೆಯಾಗಿದ್ದು, ಸಧ್ಯದಲ್ಲಿಯೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದರು.

ನಿಟ್ಟೂರು - ಹೆಬ್ಬಿಗೆ ಸಂಪರ್ಕಿಸುವ ಕಲ್ಯಾಣಿಚೌಕದ ತೂಗು ಸೇತುವೆ ಹಲವು ವರ್ಷದಿಂದ ದುರಸ್ತಿ ಕಂಡಿರಲಿಲ್ಲ. ಪ್ರಸ್ತುತ 30 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ನಡೆದ ಬಳಿಕ ಕಾಮಗಾರಿಗೆ ಚಾಲನೆ ದೊರಕಲಿದೆ ಎಂದರು.

ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ನಿಟ್ಟೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಗ್ರಾಮದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.

ಗ್ರಾ.ಪಂ. ಸದಸ್ಯ ವಿಶ್ವನಾಥ ನಾಗೋಡಿ, ಶೋಭಾ, ಮಂಜಪ್ಪ, ಪ್ರಮುಖರಾದ ರವೀಶ್ ಹೆಗಡೆ, ಮಂಜಪ್ಪ ಎಂ ಎಂ., ರತ್ನಾಕರ ಶೆಟ್ಟಿ, ಮಂಜುನಾಥ ಶೆಟ್ಟಿ ಮತ್ತಿತರರು ಇದ್ದರು.


ಕಾಮೆಂಟ್‌ಗಳಿಲ್ಲ