ಹೊಸನಗರ : ಶಿವರಾತ್ರಿ ಪ್ರಯುಕ್ತ ದೇವರ ಅಭಿಷೇಕಕ್ಕಾಗಿ ಗಂಗಾಜಲ ವಿತರಣೆ
ಹೊಸನಗರ: ಮಾಜಿ ಸಚಿವ ಮಾಳೂರು ಕೃಷ್ಣಯ್ಯ ಶೆಟ್ಟಿ ಶಿವರಾತ್ರಿ ಪ್ರಯುಕ್ತ ರಾಜ್ಯದ ವಿವಿಧ ಶಿವಾಲಯಗಳಲ್ಲಿ ದೇವರ ಅಭಿಷೇಕಕ್ಕಾಗಿ ನೀಡಿದ ಪವಿತ್ರ ಗಂಗಾ ಜಲವನ್ನು ತಾಲ್ಲೂಕು ಆಡಳಿತದ ವತಿಯಿಂದ ಹೊಸನಗರ ತಾಲ್ಲೂಕಿನ ವಿವಿಧ ಶಿವಾಲಯಕ್ಕೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಸಬಾ ಕಂದಾಯ ನಿರೀಕ್ಷಕ ರೇಣುಕೇಶ್, ಮುಂಬಾರು ಗ್ರಾಮ ಆಡಳಿತ ಅಧಿಕಾರಿ ನವೀನ್ ಆರಾಧ್ಯ, ಮುಜರಾಯಿ ಪ್ರಥಮ ದರ್ಜೆ ಸಹಾಯಕಿ ವಿಭಾಗದ ಶಿಲ್ಪ, ಗ್ರಾಮ ಸಹಾಯಕರ ಸಂಘದ ತಾಲ್ಲೂಕು ಅಧ್ಯಕ್ಷ ಬಾಳೆಕೊಪ್ಪ ನಾಗಪ್ಪ, ಜಯನಗರ ಗೋಪಿನಾಥ್, ನಕ್ಷತ್ರ ಮಂಜುನಾಥ್ ಸೇರಿದಂತೆ ವಿವಿಧ ದೇವಾಲಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ