Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ದೇಶದ್ರೋಹಿ ಶಕ್ತಿಗಳ ದಮನಕ್ಕಾಗಿ ಹೊಸನಗರದಲ್ಲಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ

ಹೊಸನಗರ : ಬಿಜೆಪಿ ಯುವ ಮೋರ್ಚಾ ಹೊಸನಗರ ಮಂಡಲ ನೇತೃತ್ವದಲ್ಲಿ ಇಂದು ಪಟ್ಟಣದ ಮಾವಿನಕೊಪ್ಪ ಸರ್ಕಲ್‌ನಿಂದ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ದೇಶದ್ರೋಹಿ ಶಕ್ತಿಗಳ ದಮನ ಕುರಿತಂತೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಈ ಕಾಲ್ನಡಿಗೆ ಜಾಥಾದಲ್ಲಿ ಪಕ್ಷದ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು. ಸದೃಢ ಭಾರತ-ಸುರಕ್ಷಿತ ಕರ್ನಾಟಕ, ಭಾರತಮಾತೆಯ ರಕ್ಷಣೆಗಾಗಿ -ಭಯೋತ್ಪಾದಕ ಶಕ್ತಿಗಳ ಅಟ್ಟಹಾಸ ಅಳಿಯಲಿ, ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ದ ದೇಶದ್ರೋಹದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂಬ ಹಲವು ಘೋಷಣೆಗಳನ್ನು ಕೂಗುತ್ತಾ ತಿರಂಗಾ ಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗಣಪತಿ ಬೆಳಗೋಡು ಮಾತನಾಡಿ, ಇತ್ತೀಚೆಗೆ ವಿಧಾನಸೌಧದ ಮೊಗಸಾಲೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಹಾಗೂ ದೇಶ ವಿಭಜನೆ ಕುರಿತಂತೆ ಮಾತನಾಡಿರುವ ಸಂಸದ ಡಿ.ಕೆ.ಸುರೇಶ್ ವಿರುದ್ಧ ದೇಶವಿರೋಧಿ ನೀತಿ ಅಡಿಯಲ್ಲಿ ಕೂಡಲೇ ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಜಾಥಾದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ವಿ. ಸುಬ್ರಹ್ಮಣ್ಯ, ಯುವ ಮೋರ್ಚಾದ ಅಧ್ಯಕ್ಷ ಗಂದ್ರಳ್ಳಿ ವಿಶ್ವನಾಥ್,  ಕಾರ್ಯದರ್ಶಿ ಚಿಕ್ಕಮಣತಿ ಅಭಿಲಾಷ್, ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಸತೀಶ್, ದೇವರಾಜ್ ಹುಳಿಗದ್ದೆ, ಆದರ್ಶ ಹೆರಟೆ, ಪಕ್ಷದ ವಿವಿಧ ಮೋರ್ಚಾಗಳ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು. 

ಕಾಮೆಂಟ್‌ಗಳಿಲ್ಲ