Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮನೆ ಬೀಗ ಮುರಿದು ಸೌದಿ ಕರೆನ್ಸಿ, ಬಂಗಾರ ದೋಚಿದ್ದವನನ್ನು ಸೆರೆ ಹಿಡಿದ ಶಿವಮೊಗ್ಗ ಪೊಲೀಸರು

ಶಿವಮೊಗ್ಗ:  ಮನೆಗೆ ಬೀಗ ಹಾಕಿ ಸೌದಿ ಅರೇಬಿಯಾಕ್ಕೆ ಹೋಗಿದ್ದ ಮಹಿಳೆಯೊಬ್ಬರ ಮನೆಯಲ್ಲಿ  ಬಂಗಾರ, ಸೌದಿಯ ನೋಟು ಸೇರಿದಂತೆ ನಗದು ಮತ್ತು ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದವನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ. ಮಿಥುನ್‌ಕುಮಾರ್,  ಬಂಧಿತ ಆರೋಪಿಯನ್ನು ತಿಮ್ಮಾನಗರದ ಸಲೀಮ್ ಬಿನ್ ಅಬ್ದುಲ್ಲಾ (44) ಎಂದು ಗುರುತಿಸಲಾಗಿದೆ. ಆರ್‌ಎಂಎಲ್ ನಗರದ ವಾಸಿ ಸಲ್ಮಾ ಬಾನು ಎನ್ನುವವರು ಸೌದಿ ಅರೇಬಿಯಾದಲ್ಲಿರುವ ತಮ್ಮ ಗಂಡನನ್ನು ನೋಡಲು ಮನೆಗೆ ಬೀಗ ಹಾಕಿ 2022ರ ಮೇ 25 ರಂದು ಸೌದಿಗೆ ತೆರಳಿದ್ದರು. ಒಂದು ವರ್ಷದ ನಂತರ ಊರಿಗೆ ವಾಪಾಸ್ಸಾದಾಗ ಮನೆಯ ಇಂಟರ್‌ಲಾಕ್ ಮುರಿದು 6 ಲಕ್ಷ ರೂ ಮೌಲ್ಯದ ಬಂಗಾರ, 1 ಲಕ್ಷ ರೂ ಮೌಲ್ಯದ ಸೌದಿಯ ಕರೆನ್ಸಿ, ಬೆಲೆಬಾಳುವ ವಾಚು ಸಹಿತ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿತ್ತು. ಈ ಬಗ್ಗೆ ಮಹಿಳೆ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು ಎಂದು ವಿವರಿಸಿದರು.

ಈ ಪ್ರಕರಣವನ್ನು ಬೇಧಿಸಲು ಹೊರಟ ಪೊಲೀಸರು ಫೆಬ್ರವರಿ 2ರಂದು ಆರೋಪಿಯನ್ನು ಪತ್ತೆ ಮಾಡಿದ್ದು, ಆತನಿಂದ ಕಳ್ಳತನ ಮಾಡಿ ಮುತ್ತೂಟ್ ಫೈನಾನ್ಸ್ ಮತ್ತು ಐಐಎಫ್‌ಎಲ್‌ನಲ್ಲಿ ಗಿರವಿಯಾಗಿಟ್ಟಿದ್ದ 8 ಲಕ್ಷ ರೂ ಮೌಲ್ಯದ ಆಭರಣ, 21 ಸಾವಿರ ರೂ ಮೌಲ್ಯದ ವಾಚು, 69 ಸಾವಿರ ರೂ ಮೌಲ್ಯದ ಸೌದಿ ಅರೇಬಿಯಾದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ಸ್‌ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಳ್ಳತನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರ್ಯಪ್ಪ, ಡಿಎಸ್‌ಪಿ ಬಾಬು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ