Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಪಟ್ಟಣದ ಶಕ್ತಿದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ - ಫೆಬ್ರವರಿ 14ರವರೆಗೆ ಜಾತ್ರೆಯ ಸಂಭ್ರಮ

ಹೊಸನಗರ : ಪಟ್ಟಣದ ಶಕ್ತಿ ದೇವತೆ ಶ್ರೀ ಮಾರಿಕಾಂಬಾ ಅಮ್ಮನವರ ವರ್ಷಾವಧಿ 9 ದಿನಗಳ  ಜಾತ್ರಾ ಮಹೋತ್ಸವಕ್ಕೆ ಇಂದು ಅದ್ದೂರಿಯ ಚಾಲನೆ ನೀಡಲಾಯಿತು. ಇಂದು ಬೆಳಿಗ್ಗೆ ಗಣಪತಿ ದೇವಸ್ಥಾನದ ಎದುರು ಭಾಗದಿಂದ ಶ್ರೀ ಅಮ್ಮನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಉತ್ಸವ ಮೂರ್ತಿಯನ್ನು ಹಳೇ ಸಾಗರ ರಸ್ತೆಯ ದುರ್ಗಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಪದಾಧಿಕಾರಿಗಳು, ಭಕ್ತವೃಂದದವರು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ತಾಯಿ ಪ್ರತಿಷ್ಠಾಪನೆಯ ಕ್ಷಣಗಳಿಗೆ ಶ್ರದ್ಧಾ ಭಕ್ತಿಯೊಂದಿಗೆ ಸಾಕ್ಷಿಯಾದರು.

ರಾತ್ರಿ 11 ಗಂಟೆಗೆ ಅಮ್ಮನವರ ಮೂರ್ತಿಯನ್ನು ತವರುಮನೆಯಾದ ಶ್ರೀ ದುರ್ಗಾಂಬ ದೇವಸ್ಥಾನದಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜಯ ಸಲ್ಲಿಸಿದ ನಂತರ ಗಂಡನ ಮನೆಯಾದ ಮಾರಿಗುಡ್ಡದ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುವುದು. ಇಲ್ಲಿ 8 ದಿನಗಳ ಕಾಲ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಫೆಬ್ರವರಿ 14ರ ಬುಧವಾರ ರಾತ್ರಿ 12 ಗಂಟೆಗೆ ವಿಸರ್ಜನ ಪೂಜೆ ನಂತರ ಸಾಗರ ರಸ್ತೆಯ ನಿಗದಿಪಡಿಸಿದ ಸ್ಥಳದಲ್ಲಿ ವಿಸರ್ಜಿಸಲಾಗುವುದು.

9 ದಿನಗಳ ಕಾಲ ಜಾತ್ರೆ ಆವರಣದಲ್ಲಿ ನಾಟಕ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನ ಕಾರ್ಯಕ್ರಮಗಳನ್ನು ಜಾತ್ರಾ ಸಮಿತಿಯವರು ಹಮ್ಮಿಕೊಂಡಿರುತ್ತಾರೆ.

ಕಾಮೆಂಟ್‌ಗಳಿಲ್ಲ