ಬಿಜೆಪಿ ಹೊಸನಗರ ಮಂಡಲ ವಿವಿಧ ಸಮಿತಿಗಳ ಘೋಷಣೆ - ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸುವಂತೆ ನೂತನ ಅಧ್ಯಕ್ಷ ಸುಬ್ರಹಣ್ಯ ಮತ್ತಿಮನೆ ಕರೆ
ಹೊಸನಗರ : ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಂಘಟನೆಗೆ ಮುಂದಾಗಿದೆ ಎಂದು ಹೊಸನಗರ ಮಂಡಲ ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳ ಜೊತೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಈ ಬಾರಿ ಕೂಡಾ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದನ್ನು ದೃಢಪಡಿಸುತ್ತಿದೆ ಎಂದರು. ಪ್ರತಿಯೊಬ್ಬ ಕಾರ್ಯಕರ್ತನು ಪಕ್ಷಸಂಘಟನೆಗೆ ಕಟಿಬದ್ಧರಾಗುವ ಮೂಲಕ ಸದೃಢ ಭಾರತದ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಉಮೇಶ್ ಕಂಚುಗಾರ್, ಆರ್.ಟಿ.ಗೋಪಾಲ್, ಎನ್.ಆರ್. ದೇವಾನಂದ್, ಜಿ.ಪಂ.ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಎ.ವಿ.ಮಲ್ಲಿಕಾರ್ಜನ, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ಎನ್. ಸುಧಾಕರ್ ಹಾಜರಿದ್ದು ಪಕ್ಷದ ತಾಲ್ಲೂಕು ಮಟ್ಟದ ವಿವಿಧ ಸಮಿತಿಗಳನ್ನು ಘೋಷಿಸಿದರು.
ಹೊಸನಗರ ಮಂಡಲ ಸಮಿತಿ;
ಸುಬ್ರಹ್ಮಣ್ಯ ಮತ್ತಿಮನೆ (ಅಧ್ಯಕ್ಷ), ದೇವೇಂದ್ರಪ್ಪಗೌಡ, ನಾಗೇಂದ್ರಪ್ಪಗೌಡ, ಎಂ.ಬಿ.ಮಂಜುನಾಥ್, ಎನ್.ವೈ.ಸುರೇಶ್, ಎ.ಟಿ.ನಾಗರತ್ನಮ್ಮ, ನಾಗರತ್ನ ದೇವರಾಜು (ಉಪಾಧ್ಯಕ್ಷರು), ನಾಗಾರ್ಜುನ ಸ್ವಾಮಿ, ಸತೀಶ ಕಾಲ್ಸಸಿ (ಪ್ರಧಾನ ಕಾರ್ಯದರ್ಶಿ), ರಾಘವೇಂದ್ರ ಕಲ್ಲುಕೊಪ್ಪ, ಉಮೇಶ್, ಪುರುಷೋತ್ತಮ ನಿಟ್ಟೂರು, ಜ್ಯೋತಿ ನಾಗರಾಜ್, ನಿರ್ಮಲ ಗಣೇಶ್, ರತ್ಮಮ್ಮ ಕೋಡೂರು (ಕಾರ್ಯದರ್ಶಿ), ಶಿವಕುಮಾರ್ ಕೋಣೆಮನೆ (ಖಜಾಂಚಿ), ಮೋಹನ್ ಮಂಡಾನಿ (ಮಾಧ್ಯಮ ವಕ್ತಾರ), ಸೋಮಶೇಖರ್, ಜಯಂತ್ ಹೆಚ್.ಸಿ. (ಸಾಮಾಜಿಕ ಜಾಲತಾಣ)ದ ಪದಾಧಿಕಾರಿಗಳೆಂದು ತಿಳಿಸಿದರು.
ತಾಲ್ಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಶಾ ರವೀಂದ್ರ ಹುಂಚ, ಪ್ರಧಾನ ಕಾರ್ಯದರ್ಶಿಗಳಾಗಿ ಸುಮಾ ಸುರೇಶ್ ಮಾರುತಿಪುರ, ಲಕ್ಷ್ಮೀ ಶ್ರೀನಿವಾಸ್ ಆಚಾರ್ಯ ರಿಪ್ಪನ್ ಪೇಟೆ ಹಾಗೂ
ಕಸಬಾ ಮಹಾಶಕ್ತಿ ಕೇಂದ್ರಕ್ಕೆ ರಮೇಶ್ ನೇರಲೆ (ಅಧ್ಯಕ್ಷ), ಕೆ.ಜಿ.ಸತೀಶ್ (ಪ್ರಧಾನ ಕಾರ್ಯದರ್ಶಿ) ಮಾಲಾ ನಾಗರಾಜ್ ಅಡ್ಡೇರಿ (ಮಹಿಳಾ ಪ್ರಮುಖ್), ಇಂದ್ರೇಶ್ ಶೇಣಿಗೆ (ಸಂಚಾಲಕ), ಮಾರುತೀಪುರ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮನೋಧರ್, ಹರೀಶ್ ಹುಂಚಾರೋಡ್ (ಪ್ರಧಾನ ಕಾರ್ಯದರ್ಶಿ), ರಾಮಚಂದ್ರ/ಮಣಿ (ಸಂಚಾಲಕ), ಕೃಷ್ಣಮೂರ್ತಿ ಕೋಡೂರು (ಪ್ರಭಾರಿ), ಸುಮಾ ಉದಯಕುಮಾರ್ ಕೀಳಂಬಿ (ಮಹಿಳಾ ಪ್ರಮುಖ್), ಸಂಚಾಲಕರಾಗಿ ಕಲ್ಲಿ ಯೋಗೇಂದ್ರಪ್ಪ, ಹೊಸನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಶ್ರೀಪತಿರಾವ್, ಸುರೇಂದ್ರ ಕೋಟ್ಯಾನ್, ಮಂಜುನಾಥ ಸಂಜೀವ್ (ಪ್ರಧಾನ ಕಾರ್ಯದರ್ಶಿ), ಮನೋಜ್ ಪೂಜಾರಿ (ಪ್ರಭಾರಿ), ರಾಜೇಶ್ವರಿ ಚಂದ್ರು (ಮಹಿಳಾ ಪ್ರಮುಖ್), ಸತ್ಯನಾರಾಯಣ (ಸಂಚಾಲಕ), ಹುಂಚಾ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಿನಾಯಕ ಹುಂಚ, ಗಿರೀಶ್ ಜಂಬಳ್ಳಿ, ರಾಮಚಂದ್ರ ಸೊನಲೆ (ಪ್ರಧಾನ ಕಾರ್ಯದರ್ಶಿ), ಮಂಜುಳಾ ಗರ್ತಿಕೆರೆ (ಮಹಿಳಾ ಪ್ರಮುಖ್), ಶ್ರೀಧರ ಸುಣಕಲ್ಲು (ಸಂಚಾಲಕ) ಹಾಗೂ ನಗರ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ರಮಾಕಾಂತ್ ಮತ್ತಿಮನೆ, ಪ್ರಕಾಶ್ ಮಾಸ್ತಿಕಟ್ಟೆ, ರಮೇಶ್ ಚಿಕ್ಕಪೇಟೆ (ಪ್ರಧಾನ ಕಾರ್ಯದರ್ಶಿ), ಮಂಜುನಾಥ ಬಂಕ್ರೀಬೀಡು (ಪ್ರಭಾರಿ), ಶಾಲಿನಿ ಜೋಗಿ (ಮಹಿಳಾ ಪ್ರಮುಖ್), ನಾರಾಯಣ ಕಾಮತ್ (ಸಂಚಾಲಕ)ರಾಗಿ ನೇಮಕಗೊಂಡಿದ್ದಾರೆ.
ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಗಿರೀಶ್ ಮುಳುಗುಡ್ಡೆ, ಗಣೇಶ್ ಅರಸಾಳು, ಹರೀಶ್ ಕುಮಾರ್.ಎನ್ (ಪ್ರಧಾನ ಕಾರ್ಯದರ್ಶಿ), ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ಲಿಂಗಮೂರ್ತಿ, ನಾಗೇಂದ್ರ ಈರಬೈಲು, ಕುಸುಮ ಮಂಜಯ್ಯ ಅರಸಾಳು (ಪ್ರಧಾನ ಕಾರ್ಯದರ್ಶಿ) ಹಾಗೂ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಖಾಸಿಂ, ಜೋಸೆಫ್ ಸಾಜಿ, ಸೀಮಾ (ಪ್ರಧಾನ ಕಾರ್ಯದರ್ಶಿ)ಯಾಗಿ ನೇಮಕಗೊಂಡಿದ್ದಾರೆ.
ಉಳಿದಂತೆ, ಓಬಿಸಿ ಮೋರ್ಚಾದ ಅಧ್ಯಕ್ಷರಾಗಿ ಗುರುರಾಜ, ಯೋಗೇಂದ್ರ ಕತ್ರಿಕೊಪ್ಪ, ನಾಗೇಶ್ ಚಂದಳ್ಳಿ (ಪ್ರಧಾನ ಕಾರ್ಯದರ್ಶಿ), ರೈತ ಮೋರ್ಚಾದ ಅಧ್ಯಕ್ಷರಾಗಿ ಶಿವಾನಂದ ಹಿರೇಮಣತಿ, ಪುರುಷೋತ್ತಮ ಚಿಟ್ಟೆಗದ್ದೆ, ಪ್ರಕಾಶ್ ರ‍್ಯಾವೆ (ಪ್ರಧಾನ ಕಾರ್ಯದರ್ಶಿ) ಹಾಗೂ ಯುವ ಮೋರ್ಚಾ ಅಧ್ಯಕ್ಷರಾಗಿ ವಿಶ್ವನಾಥ ಗಂದ್ರಳ್ಳಿ, ಅಭಿಲಾಶ್ ಚಿಕ್ಕಮಣತಿ, ಅಂಕಿತ್ ಮೇಕೇರಿ (ಪ್ರಧಾನ ಕಾರ್ಯದರ್ಶಿ)ನೇಮಕಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ