ನಾಳೆ ನಡೆಯುವ ಮುಷ್ಕರದಲ್ಲಿ ಭಾಗವಹಿಸಲು ಅನುಮತಿ ಕೋರಿ ತಹಶೀಲ್ದಾರ‍್ರಿಗೆ ಹೊಸನಗರ ಕಂದಾಯ ಇಲಾಖೆ ನೌಕರರ ಮನವಿ
ಹೊಸನಗರ : ನಾಳೆ ಅಂದರೆ ಫೆಬ್ರವರಿ 28ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ನಡೆಯುವ ಪಾದಯಾತ್ರೆ ಹಾಗೂ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಲು ಅನುಮತಿ ಕೋರಿ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ ರಶ್ಮೀ ಹಾಲೇಶ್ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಿದರು.
ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರು ಎಂದು ಖಾಯಂಗೊಳಿಸುವುದು, ಸೇವಾ ಭದ್ರತೆ ಕಲ್ಪಿಸುವುದು, ನಿವೃತ್ತಿ ನಂತರ ರೂ ಹತ್ತು ಲಕ್ಷ ಇಡುಗಂಟು ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯುವುದು ಈ ಮುಷ್ಕರದ ಮುಖ್ಯ ಉದ್ದೇಶವಾಗಿದೆ.
ಮನವಿ ಸಲ್ಲಿಸುವ ವೇಳೆ ಗ್ರಾಮ ಸಹಾಯಕರ ಸಂಘದ ತಾಲ್ಲೂಕು ಅಧ್ಯಕ್ಷ ಬಾಳೆಕೊಪ್ಪ ನಾಗಪ್ಪ, ಕಾರ್ಯದರ್ಶಿ ಸುರೇಶ್, ಸದಸ್ಯರಾದ ನಾಗರಾಜ್ ಡಿ, ಅಮ್ಜತ್ ಖಾನ್, ಸುಬ್ರಹ್ಮಣ್ಯ, ಅಶೋಕ ಕೆ.ಎಲ್, ರಾಘವೇಂದ್ರ, ಸೋಮಶೇಖರ, ನಾಗೇಂದ್ರ, ಗಣೇಶ್, ನರಸಿಂಹ ಮೂರ್ತಿ, ಚಂದ್ರಶೇಖರ್ ಇದ್ದರು.
ಕಾಮೆಂಟ್‌ಗಳಿಲ್ಲ