Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮಾರ್ಚ್ 1ಕ್ಕೆ ಹೊಸನಗರದ ನವೀಕೃತ ಬದ್ರಿಯಾ ಜುಮ್ಮಾ ಮಸೀದಿಯ ಉದ್ಘಾಟನೆ - ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ

ಹೊಸನಗರ : ಪಟ್ಟಣದ ಚರ್ಚ್ ರಸ್ತೆಯಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯ ನವೀಕೃತ ಕಟ್ಟಡ ಹಾಗೂ ಮಿನಾರ್‌‌ನ ಉದ್ಘಾಟನೆ ಮಾರ್ಚ್ ಒಂದರ ಶುಕ್ರವಾರ ಬೆಳಿಗ್ಗೆ 11:30ಕ್ಕೆ ನಡೆಯಲಿದೆ.

ಶಿವಮೊಗ್ಗ ಹಾಗೂ ಉಡುಪಿ ಜಿಲ್ಲಾ ಸಂಯುಕ್ತ ಖಾಜಿಗಳಾದ ಶೈಕುನ ಜೈನುಲ್ ಉಲಮ ಎಂ ಅಬ್ದುಲ್ ಹಮೀದ್ ಮುಸ್ಲಿಯರ್ ಹಾಗೂ ಅಲ್ಹಾಜ್ ಎಸಿ ಮಹಮದ್ ಫೈಜಿರವರ ಸಾನಿಧ್ಯದಲ್ಲಿ ಅಲ್ಹಾಸ್ ಅ ಸೈಯದ್  ಕೆ ಎಸ್ ಆಟಕೋಯಾ ತಂಗಳ್‌‌ರವರು ಮಸೀದಿಯ ನವೀಕೃತ ಕಟ್ಟಡ ಹಾಗೂ ಮಿನಾರ್‌ನ್ನು ಉದ್ಘಾಟಿಸಲಿದ್ದಾರೆ.

ಮಗರಿಬ್ ನಮಾಜಿನ ಬಳಿಕ ಬದ್ರಿಯ ಜುಮ್ಮ ಮಸೀದಿಯ ಗೌರವಾಧ್ಯಕ್ಷ ಡಾ ಬಿ.ಕೆ. ಯೂಸುಫ್ ಅಧ್ಯಕ್ಷತೆಯಲ್ಲಿ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಾಗೂ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಈ ಸಮಾರಂಭದಲ್ಲಿ ಹಲವಾರು ಧಾರ್ಮಿಕ ನೇತಾರರು ಪಾಲ್ಗೊಳ್ಳಲಿದ್ದು, ಈ ಧಾರ್ಮಿಕ ಸಮಾರಂಭದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಸಮಾರಂಭಕ್ಕೆ ಯಶಸ್ಸು ಕೋರುವಂತೆ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಕೆ. ಎ. ಅಮಾನುಲ್ಲಾರವರು ಕರೆ ನೀಡಿದ್ದಾರೆ. ಮಾರ್ಚ್ 2ರ ಶನಿವಾರ ಸಂಜೆ 6:30ಕ್ಕೆ ಸೌಹಾರ್ದ ಸಮಾರಂಭ ಹಾಗೂ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ನಡೆಯಲಿದ್ದು, ಶಾಸಕರು ಹಾಗೂ ರಾಜ ಅರಣ್ಯ ಹಾಗೂ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣರವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಬಾಳೆಹೊನ್ನೂರಿನ ಅಸಯ್ಯದ್ ಹಾಮಿಮ್ ಶಿಹಾಬ್ ತಂಗಲ್, ಹೊಸನಗರ ಬದ್ರಿಯಾ ಜುಮ್ಮ ಮಸೀದಿಯ ಖತೀಬ್ ಡಿ. ಎಂ. ಅಬೂಬಕರ್ ಮದನಿ, ಮೂಲೆಗದ್ದೆ ಮಠದ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಪಟ್ಟಣದ ಸಂತ ಅಂತೋನಿ ದೇವಾಲಯದ ರೆ. ಫಾದರ್ ಸೈಮನ್ ಹೊರಟರವರು ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮುಸ್ಲಿಂ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸಮಾರಂಭವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಬದ್ರಿಯಾ ಜುಮ್ಮ ಮಸೀದಿಯ ಅಧ್ಯಕ್ಷ ಕೆ. ಎ. ಅಮಾನುಲ್ಲಾ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ