ಹೊಸನಗರ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ’ಮಕ್ಕಳ ಸಂತೆ’ಯಲ್ಲಿ ನಡೆಯಿತು ಭರ್ಜರಿ ವ್ಯಾಪಾರ!
ಹೊಸನಗರ : ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶತಮಾನೋತ್ಸವ ಹಾಗೂ ಚಿಣ್ಣರ ಸಾಂಸ್ಕೃತಿಕ ವೈಭವದ ಅಂಗವಾಗಿ ಇಲ್ಲಿನ ನೆಹರು ಮೈದಾನದಲ್ಲಿ ಏರ್ಪಡಿಸಿದ್ದ ’ಮಕ್ಕಳ ಸಂತೆ’ಯಲ್ಲಿ ಮಕ್ಕಳು ಭರ್ಜರಿಯಾಗಿ ವ್ಯಾಪಾರ ನಡೆಸಿದರು.
ಈ ಸಂತೆಯಲ್ಲಿ ತರಕಾರಿ, ಸೊಪ್ಪು, ಎಳನೀರು, ಹಣ್ಣುಗಳಲ್ಲದೆ ವಿವಿಧ ಬಗೆಗಳ ತಿಂಡಿ ತಿನಿಸುಗಳು ಸೇರಿದಂತೆ ವಾರದ ಸಂತೆಯಂತೆ ಎಲ್ಲ ಬಗೆ ವಸ್ತುಗಳನ್ನು ವ್ಯಾಪಾರಕ್ಕಿಟ್ಟಿದ್ದ ಮಕ್ಕಳು, ಖರೀದಿಗೆಂದು ಬಂದ ಪಟ್ಟಣದ ಜನರಿಗೆ ಹಾಗೂ ತಮ್ಮ ಪೋಷಕರಿಗೆ ತಮ್ಮ ತಮ್ಮ ಮಳಿಗೆಗಳಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಪಠ್ಯೇತರ ಚಟುವಟಿಕೆಯಲ್ಲಿ ಹೊಸನತವೊಂದಕ್ಕೆ ತೆರೆದುಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಆರ್. ಕೃಷ್ಣಮೂರ್ತಿ ಹಾಗೂ ಅವರ ಕಚೇರಿ ಸಿಬ್ಬಂದಿ ವರ್ಗದವರು ಮಕ್ಕಳ ಸಂತೆಯಲ್ಲಿ ಖರೀದಿಗಿಳಿಯುವ ಮೂಲಕ ಮಕ್ಕಳ ಉತ್ಸಾಹವನ್ನು ಇಮ್ಮಡಿಗೊಳಿಸಿದರು.
ಕಾಮೆಂಟ್‌ಗಳಿಲ್ಲ