ಹೊಸನಗರದಲ್ಲಿ ಸ್ಪೋರ್ಟ್ಸ್ ಅಸೋಸಿಯೇಷನ್, ಆರೈಕೆ ಆಸ್ಪತ್ರೆ, ಜೆಎಸಿ ಜೆಸಿಐ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಹೊಸನಗರ : ಪಟ್ಟಣದ ಹೆಸರಾಂತ ಸೇವಾ ಸಂಸ್ಥೆ ಸ್ಪೋರ್ಟ್ಸ್ ಅಸೋಸಿಯೇಷನ್ ಅವರು ಶಿವಮೊಗ್ಗದ ಆರೈಕೆ ಆಸ್ಪತ್ರೆ, ಜೆಎಸಿ ಹಾಗೂ ಜೆಸಿಐ ಹೊಸನಗರ ಕೊಡಚಾದ್ರಿ ಸಂಯುಕ್ತಾಶ್ರಯದಲ್ಲಿ ಇಂದು ಸ್ಪೋರ್ಟ್ಸ್ ಅಸೋಸಿಯೇಷನ್ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಹೊಸನಗರದ ಮಾಜಿ ಶಾಸಕರು, ಶಿವಮೊಗ್ಗದ ಖ್ಯಾತ ಜನರಲ್ ಸರ್ಜನ್ ಆದ ಡಾ. ಜಿ. ಡಿ. ನಾರಾಯಣಪ್ಪ ಉದ್ಘಾಟಿಸಿದರು.
ಉದ್ಘಾಟನೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಜಿ. ಡಿ. ನಾರಾಯಣಪ್ಪ, ಆರೋಗ್ಯ ಭಾಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಕಾಯಿಲೆ ಬರುವುದಕ್ಕಿಂತ ಅದು ಬಾರದಂತೆ ನಾವು ಜಾಗ್ರತೆ ವಹಿಸಬೇಕು. ಜೀವನದಲ್ಲಿ ಯಾವುದೇ ಆಗಲಿ ಅತಿಯಾಗದೆ ಮಿತಿಯಲ್ಲಿರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಬಿ ಪರಮೇಶ್ವರ್ ರಾವ್, ಅಧ್ಯಕ್ಷ ಗುಬ್ಬಿಗ ಅನಂತರಾವ್, ಉಪಾಧ್ಯಕ್ಷ ಬಿ. ಆರ್. ಪ್ರಭಾಕರ್, ನಿರ್ದೇಶಕರಾದ ಹೆಚ್. ಬಿ. ಕಲ್ಯಾಣಪ್ಪ ಗೌಡ, ಕಾರ್ಯದರ್ಶಿ ಶ್ರೀಧರ್, ಜೆಸಿಐನ ಕೆ.ಆರ್ ಪ್ರದೀಪ್ ಕಾಡುವಳ್ಳಿ, ಅಧ್ಯಕ್ಷ ವಿನಯ್ ಮೊದಲಾದವರು ಪಾಲ್ಗೊಂಡಿದ್ದರು.
ತಜ್ಞ ವೈದ್ಯರಾದ ಜನರಲ್ ಸರ್ಜನ್ ಡಾ. ಜಿ.ಡಿ. ನಾರಾಯಣಪ್ಪ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಅಮೃತಾಂಶು, ಅರಿವಳಿಕೆ ತಜ್ಞ ಡಾ.ಕೆ. ಎಂ .ಸುರೇಶ್, ದಂತ ತಜ್ಞ ಡಾ. ಅನಿತಾ, ಕೀಲು ಮತ್ತು ಮೂಳೆ ರೋಗ ತಜ್ಞ ಡಾ. ಕೆ. ವೈ. ವಿನಯ್, ಫ್ಯಾಮಿಲಿ ಮೆಡಿಸಿನ್ ಡಾ. ಮಂಜುನಾಥ್, ಡಾ. ಗುರುದತ್ ಹಾಗೂ ಸಿಬ್ಬಂದಿ ವರ್ಗದವರು ಶಿಬಿರದಲ್ಲಿ ಪಾಲ್ಗೊಂಡ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ಹಾಗೂ ಚಿಕಿತ್ಸೆ ನೀಡಿದರು.
ಬಿ.ಎಸ್. ಸುರೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ