Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ - ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿವಾಹಿತ ಮಹಿಳೆಗೆ ಬೈಕಿನಲ್ಲಿ ಬಂದವರಿಂದ ಚೂರಿ ಇರಿತ - ಗಾಯಗೊಂಡ ಮಹಿಳೆ ಆಸ್ಪತ್ರೆಗೆ

ಹೊಸನಗರ : ಪಟ್ಟಣದ ಪಾರ್ಲರ್‌ವೊಂದರಲ್ಲಿ ಕೆಲಸ ಮಾಡುವ ನಾಜಿಮಾ (38 ವರ್ಷ) ಎಂಬ ಮಹಿಳೆಗೆ ಗಣಪತಿ ದೇವಸ್ಥಾನದ ಎದುರು ರಸ್ತೆಯಲ್ಲಿ ಬೈಕ್‌‌ನಲ್ಲಿ ಬಂದ ಅನಾಮಿಕರಿಬ್ಬರು ಬಲ ತೋಳಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. 

ನಾಜಿಮಾ ಮಧ್ಯಾಹ್ನದ ಊಟ ಮುಗಿಸಿ ಪಾರ್ಲರ‍್ರಿಗೆ ಮರಳುವಾಗ ಈ ಘಟನೆ ಸಂಭವಿಸಿದ್ದು, ಹೊಸನಗರ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ನಡೆದ ಇಂತಹ ಕೃತ್ಯ ನಾಗರೀಕರಲ್ಲಿ ಆತಂಕವನ್ನುಂಟು ಮಾಡಿದೆ. 

ಬೈಕಿನಲ್ಲಿ ಬಂದ ಇಬ್ಬರು ಯುವಕರಲ್ಲಿ ಬೈಕ್ ಚಲಾಯಿಸುತ್ತಿದ್ದಾತ ಹೆಲ್ಮೆಟ್ ಧರಿಸಿದ್ದು, ಹಿಂಬದಿ ಸವಾರ ಮಾಸ್ಕ್ ಹಾಕಿದ್ದನೆಂದು ಗಾಯಗೊಂಡ ಮಹಿಳೆ ತಿಳಿಸಿದ್ದು, ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಗಾಯಾಳು ನಾಜಿಮಾ ಬುರ್ಖಾ ಧರಿಸಿದ್ದು, ಚಾಕುವಿನಿಂದ ಇರಿದ ಬಿರುಸಿಗೆ ಬುರ್ಖಾದ ಬಲ ತೋಳಿನ ಮೇಲ್ಭಾಗ ಕತ್ತರಿಸಿ ಹೋಗಿದೆ.

ನಡು ಮಧ್ಯಾಹ್ನದ ಹೊತ್ತಿನಲ್ಲಿ ನಡೆದ ಈ ಘಟನೆ ಪಟ್ಟಣದ ಜನರಲ್ಲಿ ಸಹಜವಾಗಿಯೇ ಆತಂಕವನ್ನು ಹುಟ್ಟಿಸಿದ್ದರೆ, ಇನ್ನೊಂದೆಡೆ ತಾಲ್ಲೂಕಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಅನುಮಾನದಿಂದ ನೋಡುವಂತೆ ಮಾಡಿದೆ.

ಕಾಮೆಂಟ್‌ಗಳಿಲ್ಲ