Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಗರ ನಿತಿನ್ ಮೇಲೆ ಹಲ್ಲೆ - ಹೊಸನಗರ ಆರ್ಯ ಈಡಿಗ ಯುವ ಘಟಕ ಖಂಡನೆ

ಹೊಸನಗರ :  ಕ್ಷುಲ್ಲಕ ಕಾರಣಕ್ಕೆ ಹೊಸನಗರ ತಾಲ್ಲೂಕು ಆರ್ಯ ಈಡಿಗ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಗರ ನಿತಿನ್ ಮೇಲೆ ನಿನ್ನೆ ಕೆಲವು ಕಿಡಿಗೇಡಿಗಳು ಬಿದನೂರು ಸಮೀಪ ನಡೆಸಿರುವ ಹಲ್ಲೆಯನ್ನು ಯುವ ಘಟಕವು ತೀವ್ರವಾಗಿ ಖಂಡಿಸಿದೆ.

ನಗರ ನಿತಿನ್ 

ಇಂದು ಯುವ ಘಟಕದ ಅಧ್ಯಕ್ಷ ರಮೇಶ್ ನೇರ‍್ಲೆ ಸುದ್ದಿಗಾರರೊಂದಿಗೆ ಮಾತನಾಡಿ, ನಿತಿನ್ ಅವರ ರಾಜಕೀಯ ಬೆಳವಣಿಗೆ ಸಹಿಸದ ಕೆಲವು ಕಿಡಿಗೇಡಿಗಳು, ಕರಿಮನೆ ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್ ಜೊತೆಗೂಡಿ ಭಾನುವಾರ ರಾತ್ರಿ ನಿತಿನ್ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ಜಖಂಗೊಳಿಸಿ ನಿತಿನ್ ಮೇಲೆ ಹಲ್ಲೆ ಮಾಡಿದ್ದು, ನಿತಿನ್ ಕಣ್ಣಿಗೆ ತೀವ್ರತರದ ಗಾಯ ಮಾಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೆ ಬ್ಯಾನರ್ ಕಟ್ಟುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಹಾಗೂ ನಿತಿನ್ ಮಧ್ಯೆ ವ್ಯಾಜ್ಯ ನಡೆದಿತ್ತು. ಇದು ಹಲ್ಲೆಗೆ ಕಾರಣ ಇರಬಹುದು ಎಂಬ ಶಂಕೆಯನ್ನು ಅವರು ವ್ಯಕ್ತ ಪಡಿಸಿದರು.

ರಮೇಶ್ ನೇರ‍್ಲೆ 

ತಾಲ್ಲೂಕು ಬಿಜೆಪಿ ಯುವ ಘಟಕದ ಅಧ್ಯಕ್ಷರೂ ಆಗಿರುವ ನಗರ ನಿತಿನ್ ಅವರ ಮೇಲಿನ ಹಲ್ಲೆಯನ್ನು ಆರ್ಯ ಈಡಿಗ ಯುವ ಘಟಕವು ತೀವ್ರವಾಗಿ ಖಂಡಿಸುತ್ತಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸುತ್ತದೆ ಎಂದಿದ್ದಾರೆ. ಈ ವೇಳೆ ಯುವ ಘಟಕದ ಉಪಾಧ್ಯಕ್ಷ ಮಂಡಾನಿ ಧನಂಜಯ, ಷಣ್ಮುಖ, ಸಹ ಕಾರ್ಯದರ್ಶಿ ಸತ್ಯನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ