ಹೊಸನಗರ ಕ್ರೈಸ್ತ ಯುವತಿ ಸಂಘದಿಂದ ಇದೇ ಮೊದಲ ಬಾರಿಗೆ ಪುರುಷರ ದಿನಾಚರಣೆ - ವಿಶೇಷ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
ಹೊಸನಗರ : ಸಂತ ಅಂತೋನಿ ದೇವಾಲಯದ ಸಭಾಂಗಣದಲ್ಲಿ ಕ್ರೈಸ್ತ ಯುವತಿ ಸಂಘದವರು ಹೊಸನಗರದಲ್ಲಿ ಇಂದು ಇದೇ ಮೊದಲ ಬಾರಿಗೆ ಪುರುಷರ ದಿನಾಚರಣೆಯನ್ನು ಆಚರಿಸಿದರು.
ಸಮಾರಂಭವನ್ನು ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ರೆ ಫಾದರ್ ಸೈಮನ್ ಹೊರಟರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಪುರುಷರ ತ್ಯಾಗ ಮನೋಭಾವ ಬೆಲೆ ಕಟ್ಟಲಾಗದಂತಹ ಆಸ್ತಿ ಎಂದರು.
ಹಿರಿಯ ಧರ್ಮ ಗುರುಗಳಾದ ರೆ ಫಾದರ್ ಅಂತೋನಿ ಡಿಸೋಜ, ರೆ ಫಾದರ್ ರೋಮನ್ ಪಿಂಟೋ, ಹೋಲಿ ರೆಡಿಮರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ರುಫಿನಾ, ಪೀಟರ್ ಸಿಕ್ವೇರಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಪುರುಷರು ಸಂಬಂಧ, ಭಾವನೆಗಳ ಮೂಲಕ ಆದರ್ಶ ಪ್ರಾಯರಾಗಿ ಸದೃಢ ಕುಟುಂಬ ರೂಪಿಸಿಕೊಂಡು ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು.
ಪುರುಷರ ದಿನಾಚರಣೆ ಅಂಗವಾಗಿ ಯುವತಿ ಮಂಡಳಿಯವರು ವಿಶೇಷ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಅನಿತಾ ಪಿಂಟೋ ಸ್ವಾಗತಿಸಿದರೆ, ಪಟ್ಟಣ ಪಂಚಾಯತಿ ಸದಸ್ಯೆ ಶ್ರೀಮತಿ ಸಿಂಥಿಯಾ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ