ಹೊಸನಗರದಲ್ಲಿ ನಾಳೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಡಿಎಸ್‌ಎಸ್ ಧರಣಿ
ಹೊಸನಗರ : ಹೊಸನಗರ ಪಟ್ಟಣ ಸೇರಿ ಇಡೀ ತಾಲ್ಲೂಕಿನಲ್ಲಿರುವ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ನಾಳೆ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ)ಯ ತಾಲ್ಲೂಕು ಘಟಕ ಧರಣಿ ನಡೆಸಲು ಉದ್ದೇಶಿಸಿದೆ.
ಹೊಸನಗರ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ, ತಾಲ್ಲೂಕಿನಲ್ಲಿ ನಡೆಯುತ್ತಿರುವ ವಿದ್ಯುತ್ ಕಣ್ಣಾಮುಚ್ಚಾಲೆ, ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ನ್ಯೂನತೆ, ಬಹು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಹಲವು ಸರ್ಕಾರಿ ಕಚೇರಿಗಳನ್ನು ನಡೆಸುತ್ತಿರುವ ಕ್ರಮ ವಿರೋಧಿಸಿ, ತಾಲ್ಲೂಕಿನ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಜೆಎಂಎಂ ಯೋಜನೆಯ ಕಳಪೆ ಗುಣಮಟ್ಟದ ಕಾಮಗಾರಿ ಸೇರಿದಂತೆ ವಿವಿಧ ಜಲ್ವಂತ ಸಮಸ್ಯೆಗಳ ಕುರಿತಂತೆ ಸರ್ಕಾರ ಗಮನ ಸೆಳೆಯುವ ಸಲುವಾಗಿ ನಾಳೆ ಅಂದರೆ ಡಿಸೆಂಬರ್ 21ರ ಗುರುವಾರ ಬೆಳಿಗ್ಗೆ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ)ಯ ತಾಲ್ಲೂಕು ಘಟಕ ಧರಣಿ ನಡೆಸಲು ಉದ್ದೇಶಿಸಿದ್ದು, ಈ ಧರಣಿಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಾಲ್ಲೂಕು ಘಟಕದ ಸಂಚಾಲಕ ಬಿ.ಎಂ.ಪ್ರಕಾಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ