Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ತಾಲ್ಲೂಕು ಡಿಎಸ್‌ಎಸ್ ನಾಗಾವರ ಸಮಿತಿ ಪದಾಧಿಕಾರಿಗಳ ಆಯ್ಕೆ

ಹೊಸನಗರ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ-ನಾಗಾವರ ಬಳಗದ ಹೊಸನಗರ ತಾಲ್ಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜಿಲ್ಲಾ ಸಂಚಾಲಕ ಪರಮೇಶ್ವರ್ ದೂಗೂರು ಅಧ್ಯಕ್ಷತೆಯಲ್ಲಿ ಇಂದು ಇಲ್ಲಿನ ಗಾಯತ್ರಿ ಮಂದಿರದಲ್ಲಿ ನಡೆಯಿತು.

ತಾಲ್ಲೂಕು ನೂತನ ಸಂಚಾಲಕರಾಗಿ ಡಿ. ಮಂಜುನಾಥ್ (ಹೊಸನಗರ), ಸಂಘಟನಾ ಸಂಚಾಲಕರಾಗಿ ಪಿ.ಸಿ.ರಾಜೇಂದ್ರ (ಬ್ರಹ್ಮೇಶ್ವರ), ಶಾಶ್ವತ (ವಸವೆ), ಎಂ.ನಾಗೇಂದ್ರ (ಮಾವಿನಕೊಪ್ಪ), ಚಂದ್ರಣ್ಣ(ಮಾರಿಗುಡ್ಡ) ಹಾಗೂ ಗುರುರಾಜ್ (ಮಾವಿನಕೊಪ್ಪ) ಆಯ್ಕೆಯಾದರು.

ಈ ವೇಳೆ ಜಿಲ್ಲಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿ, ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ಹೋರಾಟದ ಮೂಲಕ ಪ್ರೊ. ಕೃಷ್ಣಪ್ಪನವರ ಜೊತೆಗೂಡಿ ಶೋಷಿತವರ್ಗದ ರಾಜ್ಯ ಮಟ್ಟದ ಬಲಿಷ್ಠ ಸಂಘಟನೆಯ ಹುಟ್ಟಿಗೆ ಕಾರಣರಾದರು. ಎಲ್ಲಾ ವರ್ಗಗಳ ಜೊತೆಗೂಡಿ ಶೋಷಿತ ವರ್ಗಕ್ಕೆ ಸರ್ಕಾರದ ವಿವಿಧ ಸೌಕರ್ಯ ಒದಗಿಸುವ ಕಾರ್ಯವನ್ನು ನೂತನ ಸಮಿತಿಯ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮಾಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ವಿಭಾಗೀಯ ಸಂಚಾಲಕ ಮಂಜುನಾಥ ನವಲೆ, ಮುಖ್ಯ ಅತಿಥಿಗಳಾಗಿ ಮಹೇಶ್ ಸಾಗರ ಹಾಗೂ ಪ್ರಭಾಕರ್ ಸಾಗರ ಇದ್ದರು. 

ಕಾಮೆಂಟ್‌ಗಳಿಲ್ಲ