Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಿಪ್ಪನ್‌ಪೇಟೆ - ಗೃಹಿಣಿ ಆತ್ಮಹತ್ಯೆ

ರಿಪ್ಪನ್‌ಪೇಟೆ : ಮೂಲತಃ ಹೊಸನಗರ ಸಮೀಪದ ಕೊಳವಳ್ಳಿಯವರಾದ ರಿಪ್ಪನ್‌ಪೇಟೆಯಲ್ಲಿ ವಾಸವಿದ್ದ ಕವನಾ (24) ಮಂಗಳವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲ್ಲಿನ ಶಾಪಿಂಗ್‌ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕವನಾ, ಕಳೆದ ನಾಲ್ಕೈದು ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ನಿನ್ನೆಯಿಂದ ಅವರ ಮೊಬೈಲಿಗೆ ಕರೆ ಮಾಡಿದರೂ ಸ್ವೀಕರಿಸದೇ ಇದ್ದಿದ್ದರಿಂದ ಅನುಮಾನಗೊಂಡ ಅವರ ಸ್ನೇಹಿತೆಯರು ಮನೆ ಬಳಿ ತೆರಳಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ.

ಪಟ್ಟಣದ ತೀರ್ಥಹಳ್ಳಿ ರಸ್ತೆಯ ಮನೆಯೊಂದರಲ್ಲಿ ಬಾಡಿಗೆಗಿದ್ದ ಕವನಾ, ಕಳೆದ ಆರು ವರ್ಷಗಳ ಹಿಂದೆ ಶಿಕಾರಿಪುರ ಮೂಲಕ ರುದ್ರೇಶ್ ಎನ್ನುವವರನ್ನು ವಿವಾಹವಾಗಿದ್ದು, ಅವರಿಗೆ ಐದು ವರ್ಷದ ಮಗನಿದ್ದಾನೆ. ಮಗುವನ್ನು ಕವನಾ ತಮ್ಮ ತವರು ಮನೆಯಲ್ಲಿ ಬಿಟ್ಟಿದ್ದು, ರಿಪ್ಪನ್‌ಪೇಟೆಯಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್‌ ಹಾಗೂ ಸಿಬ್ಬಂದಿ ತೆರಳಿದ್ದು ಪರಿಶೀಲಿಸುತ್ತಿದ್ದಾರೆ.


ಕಾಮೆಂಟ್‌ಗಳಿಲ್ಲ