ನಿಮ್ಮ ಕಾರು-ಬೈಕ್ ಆಕ್ಸಿಡೆಂಟಾದ್ರೆ ಪೊಲೀಸರು ನಿಮ್ಮನ್ನು ಆರೆಸ್ಟ್ ಮಾಡಬಹುದೇ?! - ಖ್ಯಾತ ವಕೀಲರಾದ ಪುಟ್ಟೇಗೌಡರಿಂದ ಕಾನೂನು ಅರಿವು - ಕಾರು ಮತ್ತು ಬೈಕ್ ಚಲಾಯಿಸುವವರು ನೋಡಲೇಬೇಕಾದ ವಿಡಿಯೋ
ಬೆಂಗಳೂರು : ಆಕ್ಸಿಡೆಂಟ್ ಮಾಡಿದ್ರೆ ಪೊಲೀಸರು ಅರೆಸ್ಟ್ ಮಾಡ್ತಾರೆ, ಜೈಲಿಗೆ ಹಾಕ್ತಾರೆ... ಹೀಗೆ ಏನೇನೋ ಭಯಗಳು ಕಾರು, ಬೈಕು ಸೇರಿದಂತೆ ಯಾವುದೇ ವಾಹನಗಳನ್ನು ಓಡಿಸುವವರಲ್ಲಿ ಇರುವುದು ಸಾಮಾನ್ಯ. ಇದೇ ಕಾರಣದಿಂದಲೇ ಆಕ್ಸಿಡೆಂಟ್ ಆದತಕ್ಷಣ ಚಲಾಯಿಸುತ್ತಿದ್ದ ವಾಹನವನ್ನು ನಿಲ್ಲಿಸಿ, ತಮ್ಮಿಂದಾದ ತಪ್ಪು ಒಪ್ಪಿಕೊಂಡು ನೆರವು ನೀಡುವ, ಆಸ್ಪತ್ರೆಗೆ ಕರೆದೊಯ್ಯಲು ಜೊತೆಯಾಗುವ ಅವಕಾಶ ಇದ್ದರೂ ಹಾಗೆ ಮಾಡದೇ ಗಾಡಿಯೊಂದಿಗೆ ಪರಾರಿಯಾಗುವವರೇ ಹೆಚ್ಚು. ಇದಕ್ಕೆ ಆಕ್ಸಿಡೆಂಟ್ ಆದತಕ್ಷಣ ಅಲ್ಲಿ ಸೇರುವ ಸಾರ್ವಜನಿಕರು ಆಕ್ರೋಶದಲ್ಲಿ ಏನು ಮಾಡಿ ಬಿಡುತ್ತಾರೋ ಎನ್ನುವ ಭಯವೂ ಒಂದು ಕಾರಣವಾದರೆ, ಆಕ್ಸಿಡೆಂಟ್ ಬಗ್ಗೆ ನಮ್ಮ ದೇಶದ ಕಾನೂನು ಏನು ಹೇಳುತ್ತದೆ ಎನ್ನುವ ಅರಿವಿಲ್ಲದೇ ಇರುವುದೂ ಇನ್ನೊಂದು ಕಾರಣ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಜನಸಾಮಾನ್ಯರಿಗೆ ತಮ್ಮ ವಿಡಿಯೋಗಳ ಮೂಲಕ ಸರಳ ಹಾಗೂ ಸುಲಭವಾಗಿ ಕಾನೂನಿನ ಬಗ್ಗೆ ತಿಳಿ ಹೇಳುವ, ಅರಿವು ಮೂಡಿಸುತ್ತಿರುವ ಖ್ಯಾತ ವಕೀಲರಾದ ಪುಟ್ಟೇಗೌಡ ಅವರು ಆಕ್ಸಿಡೆಂಟ್ ಬಗ್ಗೆ ಈ ನೆಲದ ಕಾನೂನು ಏನು ಹೇಳುತ್ತದೆ ಮತ್ತು ಆಕ್ಸಿಡೆಂಟ್ ಆದಾಗ ವಾಹನ ಚಲಾಯಿಸುವವರು ಏನು ಮಾಡಬೇಕು, ಮಾಡಬಾರದು ಎನ್ನುವ ಬಗ್ಗೆ ತಿಳಿಸಿರುವ ಅಪರೂಪದ ಹಾಗೂ ವಾಹನ ಚಲಾಯಿಸುವ ಎಲ್ಲರೂ ನೋಡಲೇಬೇಕಾದ ವಿಡಿಯೋವನ್ನು ಕಾನೂನು ಅರಿವು ಮೂಡಿಸುವ ಉದ್ದೇಶದಿಂದ 'ನ್ಯೂಸ್ ಪೋಸ್ಟ್‌ಮಾರ್ಟಮ್' ಇಲ್ಲಿ ನೀಡುತ್ತಿದೆ.
ಕಾಮೆಂಟ್‌ಗಳಿಲ್ಲ