Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದ ದುಮ್ಮ ವಿನಯ್ ಕುಮಾರ್‌‌ಗೆ ಶಿವಮೊಗ್ಗ ಜಿಲ್ಲಾ ಉತ್ತಮ ಸಹಕಾರಿ ಪ್ರಶಸ್ತಿ ಪ್ರದಾನ

ಹೊಸನಗರ :  ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಇತ್ತೀಚೆಗೆ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ, ಹೊಸನಗರದ ತುಂಗಾ ಅಡಿಕೆ ಸೌಹಾರ್ದದ ಅಧ್ಯಕ್ಷರು ಹಾಗೂ ಹೊಸನಗರ ಕಳೂರು ವಿಎಸ್ಎಸ್‌‌ನ ಅಧ್ಯಕ್ಷರು ಮತ್ತು ಹೊಸನಗರ ಲಯನ್ಸ್ ಕ್ಲಬ್ಬಿನ ಉಪಾಧ್ಯಕ್ಷರಾದ ಡಿ. ಆರ್. ವಿನಯ್ ಕುಮಾರ್ ದುಮ್ಮ ಅವರಿಗೆ ’ಜಿಲ್ಲಾಮಟ್ಟದ ಉತ್ತಮ ಸಹಕಾರಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಹೊಸನಗರ ತಾಲ್ಲೂಕಿನ ಉತ್ತಮ ಸಹಕಾರಿಯಾಗಿದ್ದ ’ಡಿ.ವಿ.ಆರ್’ ಎಂದೇ ಖ್ಯಾತರಾಗಿದ್ದ ದಿವಂಗತ ದುಮ್ಮ ರುದ್ರಪ್ಪ ಗೌಡರ ಪುತ್ರ ದುಮ್ಮ ವಿನಯಕುಮಾರ್‌‌ರವರಿಗೆ ಶಿವಮೊಗ್ಗದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉತ್ತಮ ಸಹಕಾರಿ ಪ್ರಶಸ್ತಿ ಲಭಿಸಿದ್ದು, ಇದರಿಂದ ಸಹಕಾರಿ ಕ್ಷೇತ್ರದಲ್ಲಿ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಕನ್ನಡರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಕನ್ನಡ ಸಂಘದವರು ಪ್ರಶಸ್ತಿ ವಿಜೇತ ವಿನಯ್ ಕುಮಾರ್ ಅವರ ಮನೆಗೆ ತೆರಳಿ ಅಭಿನಂದನೆ ತಿಳಿಸಿದರು.

ಕಾಮೆಂಟ್‌ಗಳಿಲ್ಲ