Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕೋಡೂರಿನ ಶಂಕರೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಗ್ರಾಮದ ಮಹಿಳೆಯರಿಂದ ಸಹಸ್ರ ಕುಂಕುಮಾರ್ಚನೆ

ಕೋಡೂರು : ಹೊಸನಗರ ತಾಲ್ಲೂಕು ಕೋಡೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಶಂಕರೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ಸಂಭ್ರಮದಿಂದ ನಡೆಯುತ್ತಿದ್ದು, ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಮಹಿಳೆಯರಿಂದ ಸಹಸ್ರ ಕುಂಕುಮಾರ್ಚನೆ ನಡೆಯಿತು. 

ನಿನ್ನೆ ಮಧ್ಯಾಹ್ನ ನಾಲ್ಕೂ ಮೂವತ್ತರಿಂದ ಸಂಜೆ ಆರರ ತನಕ ನಡೆದ ಸಹಸ್ರ ಕುಂಕುಮಾರ್ಚನೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಅರ್ಚಕರಾದ ರವೀಂದ್ರ ಭಟ್ ಅವರ ನೇತೃತ್ವದಲ್ಲಿ ನಡೆದ ಸಹಸ್ರ ಕುಂಕುಮಾರ್ಚನೆಯಲ್ಲಿ ಕೇಳಿ ಬರುತ್ತಿದ್ದ ದೇವಿಯ ಸಹಸ್ರ ನಾಮಾವಳಿ, ಶ್ರದ್ಧಾ ಭಕ್ತಿಯಿಂದ ಮಹಿಳೆಯರು ಮಾಡುತ್ತಿದ್ದ ಕುಂಕುಮಾರ್ಚನೆ ದೇಗುಲದ ಆವರಣದಲ್ಲಿ ನವರಾತ್ರಿ ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಶ್ರೀ ಶಂಕರೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಬನ್ನಿ ಉತ್ಸವ ನಡೆಯಲಿದ್ದು, ಇದರೊಂದಿಗೆ ನವರಾತ್ರಿಯ ಸಂಭ್ರಮಕ್ಕೆ ತೆರೆ ಬೀಳಲಿದೆ.

ಕಾಮೆಂಟ್‌ಗಳಿಲ್ಲ