Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ನಾಡ ಹಬ್ಬ ದಸರಾಕ್ಕೆ ಚಾಲನೆ - ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆ

ಹೊಸನಗರ : ತಾಲ್ಲೂಕು ದಸರಾ ಆಚರಣೆ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹೊಸನಗರದಲ್ಲಿ ಇಂದು ನಮ್ಮೂರ ನಾಡ ಹಬ್ಬ ದಸರಾಕ್ಕೆ ಚಾಲನೆ ನೀಡಲಾಯಿತು. ದಸರಾ ಆಚರಣೆ ಸಮಿತಿ ಅಧ್ಯಕ್ಷರು ಮಹಿಳೆಯರಿಗಾಗಿ ಏರ್ಪಡಿಸಿದ ವಿವಿಧ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡುವ ಮೂಲಕ ದಸರಾವನ್ನು ಉದ್ಘಾಟಿಸಿದರು.

ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯ ಬಜಾಜ್ ಗುರುರಾಜ್, ಆಟೋಟ ಸ್ಪರ್ಧೆಗಳ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ನೋರಾ ಮೆಟಲ್ಡ್‌ ಸಿಕ್ವೇರಾ, ಶ್ರೀಮತಿ ರಾಧಿಕಾ ರತ್ನಾಕರ ಶೆಟ್ಟಿ, ಅಶ್ವಿನಿ ಸೇರಿದಂತೆ ಪಟ್ಟಣ ಪಂಚಾಯಿತಿ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು

ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ಓಟದ ಸ್ಪರ್ಧೆ, ಚಿತ್ರಕಲೆ, ಸಂಗೀತ ಕುರ್ಚಿ, ಸಾಂಪ್ರದಾಯಿಕ ಉಡುಪು, ವೇಗದ ನಡಿಗೆ, ಲಿಂಬೂ ಚಮಚ, ನಿಧಾನಗತಿಯ ಸೈಕಲ್ ಸ್ಪರ್ಧೆ, ಮಡಿಕೆ ಒಡೆಯುವುದು, ವಿವಿಧ ರೀತಿಯ ಜಡೆ ಹೆಣೆಯುವುದು, ಹೂಬತ್ತಿ ರಚನೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಹೊಸನಗರದ ಮಹಿಳೆಯರು ಅತ್ಯುತ್ಸಾಹದಿಂದ ಈ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು. 


ಕಾಮೆಂಟ್‌ಗಳಿಲ್ಲ