ಹೊಸನಗರ ತಾಲ್ಲೂಕು ಜೆಸಿಬಿ, ಹಿಟಾಚಿ ಮಾಲೀಕರ ಸಂಘದ ಸಭೆ - ಹೊರ ಜಿಲ್ಲೆಗಳ ಜೆಸಿಬಿಗಳನ್ನು ಬಳಸದಂತೆ ಆಗ್ರಹ
ಹೊಸನಗರ : ಹೊಸನಗರ ತಾಲ್ಲೂಕು ಜೆಸಿಬಿ, ಹಿಟಾಚಿ ಮಾಲೀಕರ ಸಂಘ ಸಭೆ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಅಧ್ಯಕ್ಷ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಹೊರ ಜಿಲ್ಲೆಗಳ ಜೆಸಿಬಿ, ಹಿಟಾಚಿ ವಾಹನಗಳನ್ನು ತಾಲ್ಲೂಕಿನಿಂದ ಹೊರ ಹಾಕುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.ಹೊಸ ದರ ನಿಗದಿ, ಡಿಸೆಂಬರ್ ತಿಂಗಳಲ್ಲಿ ಮತ್ತೆ ಸಭೆ ಸೇರಿ ಜೆಸಿಬಿ, ಹಿಟಾಚಿ ಮಾಲೀಕರ ಹಿತ ಕಾಪಾಡಲು ಸಂಘ ಬದ್ದ. ಹೊರ ಜಿಲ್ಲೆಗಳಿಂದ ಒಬ್ಬರೇ ಹತ್ತಾರು ವಾಹನ ಬಾಡಿಗೆಗೆ ತಂದು ಸ್ಥಳೀಯ ಮಾಲೀಕರ ಆರ್ಥಿಕ ಸ್ಥಿತಿಗೆ ಹೊಡೆತ ಕೊಡುವ ಕೆಲಸವನ್ನು ಮೊದಲು ಬಂದ್ ಮಾಡುವಂತೆ ಸಭೆಯಲ್ಲಿ ಒಕ್ಕೊರಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಕುರಿತು ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಜಿಲ್ಲಾಡಳಿತದ ಗಮನ ಸೆಳೆಯಲು ಈ ಸಂದರ್ಭದಲ್ಲಿ ಮನವಿ ನೀಡಲಾಯಿತು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಗೌರಾವಾಧ್ಯಕ್ಷ ಹಿಟಾಚಿ ಶ್ರೀಧರ್ ಹಳಗುಂದ, ಪ್ರಶಾಂತ ಗೌಡ, ಕಾರ್ಯದರ್ಶಿ ಮಹೇಶ್ ಗೇರುಪುರ, ಧರ್ಮ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಾಮೆಂಟ್‌ಗಳಿಲ್ಲ