Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ಸಡಗರ ಸಂಭ್ರಮದ ಮಹಾನವಮಿ ಆಯುಧ ಪೂಜೆ-ಚೆಂಡು ಹೂಗಳಿಂದ ಅಲಂಕೃತಗೊಂಡ ವಾಹನಗಳು

ಹೊಸನಗರ : ಹೊಸನಗರದಲ್ಲಿ ನವರಾತ್ರಿಯ 9ನೇ ದಿನವಾದ ಇಂದು ಮಹಾನವಮಿ ಮತ್ತು ಆಯುಧ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸರ್ಕಾರಿ ವಾಹನ ಹಾಗೂ ಖಾಸಗಿ ವಾಹನಗಳನ್ನು ಚೆಂಡು ಹೂಗಳಿಂದ ಅಲಂಕರಿಸಿ ಕುಂಬಳಕಾಯಿಯನ್ನು ನಿವಾಳಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ, ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು.

ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ ಜಯನಗರ ಚಾಮುಂಡಿ ಬೆಟ್ಟದಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಚಂಡಿಕಾ ಹೋಮ ನಡೆಸುವ ಮೂಲಕ ನವರಾತ್ರಿಯನ್ನು ವೈಭವದಿಂದ ಆಚರಿಸಲಾಯಿತು. ನವರಾತ್ರಿಯ 9 ದಿನಗಳ ಕಾಲವೂ ಇಲ್ಲಿ ಅನ್ನ ಸಂತರ್ಪಣೆ ನಡೆದಿದ್ದು, ಭಕ್ತವೃಂದ ಹಬ್ಬದ ಸಂಭ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.


ಕಾಮೆಂಟ್‌ಗಳಿಲ್ಲ