ಹೊಸನಗರದಲ್ಲಿ ದುರ್ಗಾಷ್ಟಮಿ ಬೆಳಗಿನ ಜಾವ ಕಳ್ಳತನ - ದೇವಸ್ಥಾನದ ಹುಂಡಿಯ ಚಿಲ್ಲರೆ ಬಿಟ್ಟು ನೋಟುಗಳನ್ನಷ್ಟೇ ಕದ್ದೊಯ್ದ ಕಳ್ಳರು!
ಹೊಸನಗರ : ಪಟ್ಟಣದ ಚೌಡಮ್ಮ ರಸ್ತೆಯ ಶ್ರೀ ನಾಗ ಚೌಡೇಶ್ವರಿ ಗುಡಿಯ ಬೀಗ ಹಾಗೂ ಹಳೆ ಸಾಗರ ರಸ್ತೆಯ ಜೀವಿ ವೇಣುಗೋಪಾಲ್ ಎನ್ನುವವರ ಮನೆಯಲ್ಲಿ ಬಾಡಿಗೆಗಿದ್ದ ಶಿಕ್ಷಕರೊಬ್ಬರ ಮನೆಯ ಹೊರಗಿನ ಹಾಗೂ ಒಳಗಿನ ಬಾಗಿಲಿನ ಬೀಗ ಮುರಿದು, ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನವರಾತ್ರಿ ದುರ್ಗಾಷ್ಟಮಿಯ ಬೆಳಗಿನ ಜಾವ ಸಂಭವಿಸಿದ್ದು ಪಟ್ಟಣದ ಜನರಲ್ಲಿ ಆತಂಕ ಹುಟ್ಟಿಸಿದೆ.
ಕೃತ್ಯ ನಡೆದಿರುವ ಸುದ್ದಿ ತಿಳಿದಾಕ್ಷಣ ಸಿಪಿಐ ಗುರಣ್ಣ ಎಸ್. ಹೆಬ್ಬಾಳ, ಪಿಎಸ್ಐ ಶಿವಾನಂದ ಕೋಳಿ ಮತ್ತು ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕಳ್ಳರ ಪತ್ತೆಗಾಗಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸುವುದಾಗಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಿಪಿಐ ಗುರಣ್ಣ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ