Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಸುಮೇದ ಅಡಿಕೆ ಮಂಡಿಯ ಗೋದಾಮಿನಿಂದ 1.33 ಲಕ್ಷ ಬೆಲೆಬಾಳುವ ಅಡಿಕೆ ಕಳವು - ಮೂವರು ಸ್ಥಳೀಯ ಯುವಕರು ಪೊಲೀಸ್‌ ವಶಕ್ಕೆ

ಹೊಸನಗರ : ಇಲ್ಲಿನ ಶಿವಪ್ಪ ನಾಯಕ ರಸ್ತೆಯಲ್ಲಿರುವ ಸುಮೇದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದವರು ಪ್ರವಾಸಿ ಮಂದಿರ ರಸ್ತೆಯ ಶ್ರೀ ವಿದ್ಯಾಸಂಘ ರಂಗಮಂದಿರದ ಕಟ್ಟಡದಲ್ಲಿ ಕಳೆದ ಎರಡು ವರ್ಷಗಳಿಂದ ರೈತರಿಂದ ಪಡೆದ ಅಡಿಕೆ ಚೀಲಗಳನ್ನು ದಾಸ್ತಾನು ಮಾಡುತ್ತಿದ್ದು, ಇದರ ಸುರಕ್ಷತೆಗಾಗಿ ಸುಬ್ರಮಣ್ಯ ಎನ್ನುವ ಸೆಕ್ಯೂರಿಟಿ ಗಾರ್ಡ್‌‌ನ್ನೂ ಕೂಡಾ ಸಹಕಾರಿ ಸಂಘದವರು ನೇಮಿಸಿದ್ದರು.

ಆದರೆ ಇದೇ ಸೆಪ್ಟೆಂಬರ್ 23 ರಂದು ಗುರುವಾರ ಸಂಜೆ ದಾಸ್ತಾನು ಪರಿಶೀಲಿಸಿದಾಗ ಸಂಗ್ರಹಿಸಿಟ್ಟಿದ್ದ ಅಡಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. 798 ಕ್ವಿಂಟಲ್ 82 ಕೆಜಿ ಅಡಿಕೆಯನ್ನು ಒಟ್ಟು 1168 ಚೀಲ ಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಸೆಪ್ಟೆಂಬರ್‌ 22ರ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದು, ನಂತರ ಎಪಿಎಂಸಿಯಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ತೆರಳಿದ್ದು, ಸಂಜೆ ನಾಲ್ಕು ಗಂಟೆಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ವಾಪಾಸ್ ಬಂದಾಗ ಗೋದಾಮಿನಲ್ಲಿ 10 ಚೀಲಗಳಲ್ಲಿ ಇದ್ದ 2 ಕ್ವಿಂಟಲ್ 72 ಕೆಜಿ 500 ಗ್ರಾಂ ಅಡಿಕೆ, ಕಳ್ಳತನವಾಗಿರುವ ಬಗ್ಗೆ ಕಚೇರಿಯ ಸಿಬ್ಬಂದಿ ಪ್ರಕಾಶ್‌ ಎನ್ನುವವರಿಂದ ವಿಷಯ ತಿಳಿದಿದೆ ಹಾಗೂ ಅದರ ಮೊತ್ತ 1,33,000 ರೂಪಾಯಿಗಳೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಸಹಕಾರ ಸಂಘದ ಸಿಇಒ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಿಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸ್ಥಳೀಯರೆನ್ನಲಾದ ಮೂವರನ್ನು ತಮ್ಮ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಕಾಮೆಂಟ್‌ಗಳಿಲ್ಲ