ಅರಳಸುರಳಿ ಅಗ್ನಿ ದುರಂತ - ಕೇಕುಡ ಭರತ್‌ನ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತಿದೆಯಾ ಅಂತ್ಯಸಂಸ್ಕಾರ?!
ತೀರ್ಥಹಳ್ಳಿ : ಅರಳಸುರಳಿ ಬೆಂಕಿ ದುರಂತದಲ್ಲಿ ಬದುಕುಳಿದಿದ್ದ ಕೇಕುಡ ಕುಟುಂಬದ ಭರತ್ ಕೇಕುಡ ನಿನ್ನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅವನ ಅಂತಿಮ ಇಚ್ಛೆಗೆ ವಿರುದ್ಧವಾಗಿ ಅಂತ್ಯ ಸಂಸ್ಕಾರ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
’ನ್ಯೂಸ್ ಪೋಸ್ಟ್‌ಮಾರ್ಟಮ್’ಗೆ ಸ್ಥಳೀಯರು ತಿಳಿಸಿದಂತೆ, ದುರಂತದಲ್ಲಿ ಬದುಕುಳಿದಿದ್ದ ಭರತ್‌ನನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮತ್ತು ಅವನನ್ನು ಬೆಂಕಿಯಿಂದ ರಕ್ಷಿಸಿದ ಸ್ಥಳೀಯರ ಬಳಿ ತಾನು ಸತ್ತರೆ ತನ್ನ ತಂದೆ, ತಾಯಿ ಮತ್ತು ಅಣ್ಣನನ್ನು ಸಂಸ್ಕಾರ ಮಾಡಿದಲ್ಲೇ ತನ್ನ ಸಂಸ್ಕಾರ ಮಾಡುವಂತೆ ಕೇಳಿಕೊಂಡಿದ್ದನಂತೆ. ಅಂದರೆ ಈಗಾಗಲೇ ದುರಂತದಲ್ಲಿ ಕೊನೆಯುಸಿರೆಳೆದಿದ್ದ ರಾಘವೇಂದ್ರ, ಪತ್ನಿ ನಾಗರತ್ನಾ ಮತ್ತು ಹಿರಿಯ ಮಗ ಶ್ರೀರಾಮ್‌ನನ್ನು ಪೋಸ್ಟ್‌ಮಾರ್ಟಮ್ ನಂತರ ಅರಳಸುರಳಿಯಲ್ಲೇ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಈ ಪ್ರಕಾರ ಈಗ ಕೊನೆಯುಸಿರೆಳೆದಿರುವ ಭರತ್‌ನ ಅಂತ್ಯಸಂಸ್ಕಾರ ಆತನ ಇಚ್ಛೆಯಂತೆ ಅರಳಸುರಳಿಯಲ್ಲೇ ಆಗಬೇಕಿತ್ತು. ಆದರೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಭರತ್‌ನ ಅಂತ್ಯಸಂಸ್ಕಾರ ವಿಲ್ಸನ್ ಗಾರ್ಡನ್ನಿನ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇನ್ನೂ ಕೆಲವು ಮೂಲಗಳ ಪ್ರಕಾರ ಸಾಯುವ ಮೊದಲು ಶ್ರೀರಾಮ್ ತಮ್ಮ ಸಾವಿನ ಕುರಿತು ಡೆತ್ ನೋಟ್ ಕೂಡಾ ಬರೆದಿಟ್ಟಿದ್ದ ಎನ್ನಲಾಗುತ್ತಿದೆ. ಈ ಡೆತ್ ನೋಟ್‌ನಲ್ಲಿ ತಮ್ಮ ಸಾವಿನ ಕಾರಣದೊಂದಿಗೆ ಅಂತಿಮ ಸಂಸ್ಕಾರದ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು ಎನ್ನುವ ಗುಸುಗುಸು ಕೇಳಿಬರುತ್ತಿದೆ. ತಂದೆ ತಾಯಿ ಸಹಜವಾಗಿ ಸಾವನ್ನಪ್ಪಿದ ನಂತರ ಬೇರೆ ದಾರಿ ಕಾಣದೆ ತಮ್ಮನ್ನೂ ಕೊನೆಗೊಳಿಸಿಕೊಳ್ಳಲು ತೀರ್ಮಾನಿಸಿದ್ದ ಅಣ್ಣ ತಮ್ಮ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿದ್ದು, ಆನಂತರ ಅಣ್ಣ ತಮ್ಮಂದಿರಲ್ಲಿ ಒಬ್ಬರು ಸಮೀಪದ ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್‌ನ್ನು ಕೂಡಾ ತಂದುಕೊಂಡಿದ್ದರು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಇದರ ನಡುವೆ ಕೋರ್ಟಿನ ವ್ಯಾಜ್ಯದ ವಿಷಯವಾಗಿಯೂ ಸೋಲು ಕಾಣುತ್ತಿದ್ದ ರಾಘವೇಂದ್ರ ಕೇಕುಡ ಕುಟುಂಬಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ೮ನೇ ತಾರೀಖಿನಂದೇ ಕೋರ್ಟಿನಿಂದ ಮಹತ್ವದ ಆದೇಶವೊಂದು ಹೊರಬೀಳುವ ಸಾಧ್ಯತೆಗಳಿತ್ತು ಎನ್ನಲಾಗಿದ್ದು, ಈ ಸಂಗತಿಯೂ ಕೂಡಾ ರಾಘವೇಂದ್ರ ಕೇಕುಡ ಕುಟುಂಬವನ್ನು ವಿಚಲಿತಗೊಳಿಸಿತ್ತು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ತನ್ನ ಪಾಡಿಗೆ ತಾನಿದ್ದ ಅರಳಸುರಳಿಯ ರಾಘವೇಂದ್ರ ಕೇಕುಡ ಅವರ ಕುಟುಂಬ ಭರತ್‌ನ ಸಾವಿನೊಂದಿಗೆ ಸಂಪೂರ್ಣವಾಗಿ ಕೊನೆಗೊಂಡಂತಾಗಿದೆ.
ಕಾಮೆಂಟ್‌ಗಳಿಲ್ಲ