Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದ ಹೆಬ್ಬೈಲಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಜನ ಅಂದರ್ - 80 ಸಾವಿರ ರೂಪಾಯಿ ನಗದು ವಶ

ಹೊಸನಗರ : ಹೊಸನಗರ ತಾಲ್ಲೂಕು ಪುರಪ್ಪೆಮನೆ ಬಳಿಯ ಹೆಬ್ಬೈಲು ಸೋಮೇಶ್ವರ ದೇವಸ್ಥಾನ ಸಮೀಪದ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಕಾನೂನುಬಾಹಿರವಾಗಿ ಆಡುತ್ತಿರುವ ಬಗ್ಗೆ ಖಚಿತ ವರ್ತಮಾನ ಪಡೆದ ಹೊಸನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಶಿವಾನಂದ ವೈ.ಕೆ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ, ಆನಂದಪುರ ಹಾಗೂ ಸಾಗರ ವಾಸಿಗಳಾದ 9 ಜನರನ್ನು ದಸ್ತಗಿರಿ ಮಾಡಿ, ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ 80,500 ರೂಗಳೊಂದಿಗೆ, 52 ಇಸ್ಪೀಟ್ ಎಲೆ, ಚಾರ್ಜರ್ ಲೈಟ್ ಹಾಗೂ ಟಾರ್ಪಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಜಿ ಕೆ, ಎ ಎಸ್ ಪಿ ಅನಿಲ್ ಕುಮಾರ್ ಎನ್. ಬೂಮರೆಡ್ಡಿ, ತೀರ್ಥಹಳ್ಳಿ ಉಪ ವಿಭಾಗದ ಡಿ.ವೈ.ಎಸ್.ಪಿ ಗಜಾನನ ಎಂ. ಸುತಾರ, ಸರ್ಕಲ್ ಇನ್ಸ್‌ಪೆಕ್ಟರ್‌ ಗುರಣ್ಣ ಎಸ್. ಹೆಬ್ಬಾಳ್ ಮಾರ್ಗದರ್ಶನದಲ್ಲಿ ಹೊಸನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಶಿವಾನಂದ ವೈ. ಕೆ ರವರು ಸಿಬ್ಬಂದಿಗಳಾದ ಈರೇಶ್, ಗಂಗಪ್ಪ, ಬಟ್ಟೋಲಿ, ಸುನೀಲ್, ತೀರ್ಥೇಶ್‌, ಶಶಿಧರ, ಸಂತೋಷ್ ನಾಯಕ್, ಗೋಪಾಲಕೃಷ್ಣ, ಅವಿನಾಶ್, ಮಹೇಶ, ಸಂದೀಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಕಾಮೆಂಟ್‌ಗಳಿಲ್ಲ