Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ - ಹೊಸನಗರದಲ್ಲಿ 3.9 ಕಿ.ಮೀ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸನಗರ : ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ 203 ಕಿಲೋಮೀಟರ್ ಉದ್ದ ಇದ್ದು, ಇಲ್ಲಿನ ಮೆಸ್ಕಾಂ ಎದುರಿನ ಅಪ್ಪು ಸರ್ಕಲ್ಲಿನಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣರವರು 3.9 ಕಿ.ಮೀ ರಸ್ತೆ ಕಾಮಗಾರಿಗೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ’ರಾಣೇಬೆನ್ನೂರು ಬೈಂದೂರು  ರಾಷ್ಟ್ರೀಯ ಹೆದ್ದಾರಿ 203 ಕಿಮೀ ಉದ್ದ ಇದ್ದು, 171 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 7 ಹಂತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಹೊಸನಗರ ತಾಲೂಕಿನಲ್ಲಿ 27.78 ಕಿಮೀ ಕಾಮಗಾರಿ ಭರದಿಂದ ಸಾಗುತ್ತಿದೆ’ ಎಂದರು. ಇದೇ ಸಂದರ್ಭದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಮೆಸ್ಕಾಂ ಎದುರಿನ ಸರ್ಕಲ್ಲನ್ನು ಇನ್ನು ಮುಂದೆ ಕರ್ನಾಟಕ ರತ್ನ ಡಾ ಪುನೀತ್ ರಾಜಕುಮಾರ್ ವೃತ್ತ ಎಂದು ಘೋಷಿಸಲಾಗುವುದು ಎಂದು ಹೇಳಿದರು.

ನ್ಯಾಶನಲ್ ಕನ್ಸ್ಟ್ರಕ್ಷನ್‌ ಕಂಪೆನಿಯವರು ಈ ಕಾಮಗಾರಿ ಮಾಡಲಿದ್ದು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಶಾಸಕರು ಅವರಿಗೆ ಸೂಚಿಸಿದರು.

ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯು 171 ಕೋಟಿ ರು ವೆಚ್ಚದಲ್ಲಿ ನಡೆಯಲಿದ್ದು, ಒಟ್ಟು 27.78 ಕಿಲೋಮೀಟರ್ ರಸ್ತೆ ಕಾಮಗಾರಿ ಹಾಗೂ ಎರಡು ಸೇತುವೆ ಕಾಮಗಾರಿಯನ್ನು ಇದು ಒಳಗೊಂಡಿರಲಿದೆ.

ಈ ಸಂದರ್ಭದಲ್ಲಿ ನ್ಯಾಶನಲ್ ಕನ್ಸ್ಟ್ರಕ್ಷನ್‌ ಕಂಪನಿಯ ಗುತ್ತಿಗೆದಾರರು, ಅಭಿಯಂತರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಾರುತಿ, ಪಟ್ಟಣ ಪಂಚಾಯ್ತಿಯ ಸದಸ್ಯರಾದ ಕೆ. ಕೆ. ಅಶ್ವಿನಿ ಕುಮಾರ್, ಶಾಯಿನಾ ನಾಸಿರ್, ತಾ.ಪಂ. ಮಾಜಿ ಸದಸ್ಯ ಏರಿಗೆ ಉಮೇಶ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಗೋಪಿನಾಥ್, ಬಾವಿಕಟ್ಟೆ ಸತೀಶ್, ವಿನಯ್ ಡಿ.ಎಂ, ಸದಾಶಿವ ಶೆಟ್ಟಿ, ಬೃಂದಾವನ ಪ್ರವೀಣ, ಮಾರುತೀಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಚಿದಂಬರ, ಕರ್ನಾಟಕ ರತ್ನ ಡಾ ಪುನೀತ್ ರಾಜಕುಮಾರ್ ಕನ್ನಡ ಸಂಘದ ಅಧ್ಯಕ್ಷ ಎಸ್ ಪ್ರಶಾಂತ್, ಗಣೇಶ, ಅರವಿಂದ್ ಮೊದಲಾದವರು ಉಪಸ್ಥಿತರಿದ್ದರು


ಕಾಮೆಂಟ್‌ಗಳಿಲ್ಲ