ಹೊಸನಗರದಲ್ಲಿ ಅಡಿಕೆ ಕಳ್ಳರು ಪೊಲೀಸರ ಕೈಗೆ ಸಿಕ್ಕಿ ಬಿದ್ದರು
ಹೊಸನಗರ : ಇಲ್ಲಿನ ಶಿವಪ್ಪ ನಾಯಕ ರಸ್ತೆಯಲ್ಲಿರುವ ಸುಮೇಧಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಗೋದಾಮಿನ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 1,33,000 ರೂಪಾಯಿ ಮೌಲ್ಯದ ಅಡಿಕೆ ಹಾಗೂ ಕಳ್ಳತನ ಮಾಡಲು ಬಳಸಿದ್ದ ಒಂದು ಬೈಕ್‌ನ್ನು ವಶಪಡಿಸಿಕೊಂಡಿರುತ್ತಾರೆ.
ಹೊಸನಗರದ ಮಾವಿನಕೊಪ್ಪ ಸಾಗರ ರಸ್ತೆಯ ರವಿರಾಜ ಎನ್. ಬಿನ್ ಸತ್ಯನಾರಾಯಣ (32), ಸಾಗರ ರಸ್ತೆಯ ನಾಗರಾಜ ಪಿ ಬಿನ್ ಲೇಟ್ ಪುಟ್ಟಯ್ಯಾಚಾರಿ (31) ಮತ್ತು ಮಾವಿನಕೊಪ್ಪದ ರಾಜೇಶ ಬಿನ್ ಲೇಟ್ ವಸಂತ (40) ಒಟ್ಟಾಗಿ ಸೆಪ್ಟೆಂಬರ್ 21ನೇ ತಾರೀಖಿನಂದು ಹೊಸನಗರದ ಐಬಿ ರಸ್ತೆಯಲ್ಲಿರುವ ಸುಮೇಧಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿದ್ಯಾಸಂಘ (ರಿ) ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯಲ್ಲಿ 2 ಕ್ವಿಂಟಲ್ 72 ಕೆಜಿ ಕಳ್ಳತನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇವರನ್ನು 27ನೇ ತಾರೀಕಿನಂದು ಬಂಧಿಸಿದ್ದಾಗಿ ಹೊಸನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಜಿ ಕೆ, ಅಡಿಶನಲ್ ಎಸ್ ಪಿ ಅನಿಲ್ ಕುಮಾರ್ ಎನ್. ಭೂಮರೆಡ್ಡಿ, ತೀರ್ಥಹಳ್ಳಿ ಉಪ ವಿಭಾಗದ ಡಿ.ವೈ.ಎಸ್.ಪಿ ಗಜಾನನ ಎಂ. ಸುತಾರ, ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್. ಹೆಬ್ಬಾಳ್ ಮಾರ್ಗದರ್ಶನದಲ್ಲಿ ಹೊಸನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ವೈ. ಕೆ, ಎಎಸ್‌ಐ ಸತೀಶ್ ರಾಜ್ ರವರು ಸಿಬ್ಬಂದಿಗಳಾದ ಸುನೀಲ್, ರಂಜಿತ್ ಕುಮಾರ್, ಗಂಗಪ್ಪ ಬಟೋಲಿ, ಸಂದೀಪ, ಮಹೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ