Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದ ಸಾವೇಹಕ್ಲಿನಲ್ಲಿ ಅತ್ಯಧಿಕ 125 ಮಿ.ಮೀ ಮಳೆ ದಾಖಲು - ತಾಲ್ಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ

ಹೊಸನಗರ: ರಾಜ್ಯದ ಪ್ರಮುಖ ವಿದ್ಯುದಾಗಾರ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲ್ಲೂಕಿನಾದ್ಯಂತ ಹಸ್ತ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಶನಿವಾರ ಬೆಳಿಗ್ಗೆ ಅಂದರೆ ಇಂದು ಬೆಳಿಗ್ಗೆ 8:00 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಸಾವೇಹಕ್ಲಿನಲ್ಲಿ ಅತ್ಯಧಿಕ ಮಳೆಯಾಗಿದೆ.

ಸಾವೇಹಕ್ಲಿನಲ್ಲಿ 125 ಮಿಲಿ ಮೀಟರ್ ಮಳೆ ದಾಖಲಾಗಿದ್ದರೆ, ಚಕ್ರ ನಗರದಲ್ಲಿ 118, ಮಾಸ್ತಿಕಟ್ಟೆಯಲ್ಲಿ 72, ಹುಲಿಕಲ್ಲಿನಲ್ಲಿ 71, ಯಡೂರಿನಲ್ಲಿ 52, ಮಾಣಿಯಲ್ಲಿ 50, ಹೊಸನಗರದಲ್ಲಿ 47.2 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ. ಶನಿವಾರ ಬೆಳಿಗ್ಗೆಯಿಂದ ಸಹ ತಾಲ್ಲೂಕಿನ ಎಲ್ಲೆಡೆ ನಿರಂತರ ಮಳೆ ಬೀಳುತ್ತಿರುವ ಬಗ್ಗೆ ವರದಿಯಾಗಿದೆ.

ಕಾಮೆಂಟ್‌ಗಳಿಲ್ಲ