Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಗವಟೂರಿನ ತಾವರೆಕೆರೆಯಲ್ಲಿ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಗಣಪತಿ ವಿಸರ್ಜನೆ

ರಿಪ್ಪನ್‌ಪೇಟೆ : ರಿಪ್ಪನ್‌ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯು 56ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿದ್ದ ಗಣಪತಿಮೂರ್ತಿಯನ್ನು ಶುಕ್ರವಾರ ಬೆಳಿಗ್ಗೆ ಹೊಸನಗರ ರಸ್ತೆಯಲ್ಲಿರುವ ಗವಟೂರು ಸಮೀಪದ ತಾವರೆಕೆರೆಯಲ್ಲಿ ವಿಸರ್ಜಿಸಲಾಯಿತು. 
28ನೇ ತಾರೀಖಿನ ಗುರುವಾರ ಆರಂಭವಾದ ರಿಪ್ಪನ್‌ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಗಣಪತಿಮೂರ್ತಿಯ ವಿಸರ್ಜನಾ ಮೆರವಣಿಗೆ ರಾತ್ರಿಯಿಡೀ ರಿಪ್ಪನ್‌ಪೇಟೆಯ ಪ್ರಮುಖ ಬೀದಿಗಳಲ್ಲಿ ಸಾಗಿ, ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗಣಪತಿಯ ವಿಸರ್ಜನೆಯೊಂದಿಗೆ ಮುಕ್ತಾಯವಾಯಿತು. ಪಟ್ಟಣದ ಬೀದಿಗಳಲ್ಲಿ ಜನರ ಜಯಘೋಷ ಹಾಗೂ ನೃತ್ಯದೊಂದಿಗೆ ಸಾಗಿದ ಗಣಪತಿಯ ಮೆರವಣಿಗೆಯಲ್ಲಿ ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಊರುಗಳ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದು, ಇಡೀ ರಿಪ್ಪನ್‌ಪೇಟೆಯಲ್ಲಿ ಹಬ್ಬದ ಸಂಭ್ರಮವೇ ಮೆರವಣಿಗೆಯ ರೂಪದಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತಿತ್ತು. ಮೆರವಣಿಗೆಯಲ್ಲಿ ಭದ್ರಾವತಿಯ ವೀರಗಾಸೆ ತಂಡ, ಶಿಗ್ಗಾಂವ್‌ನ ಕೀಲುಕುದುರೆ, ಗೊಂಬೆಕುಣಿತದೊಂದಿಗೆ ಸ್ಥಳೀಯ ಡೊಳ್ಳು ಕುಣಿತ ತಂಡದವರೂ ಸೇರಿ ಹಲವು ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದು ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿತ್ತು. ರಿಪ್ಪನ್‌ಪೇಟೆಯ ವಿನಾಯಕ ಸರ್ಕಲ್ಲಿನಲ್ಲಿ ಶಿವಮೊಗ್ಗದ ಪ್ರಸಿದ್ಧ ಗೀತಾ ಆರ್ಕೆಸ್ಟ್ರಾ ತಂಡದವರಿಂದ ರಸಮಂಜರಿ ಕಾರ್ಯಕ್ರಮವೂ ಈ ಸಂದರ್ಭದಲ್ಲಿ ನಡೆಯಿತು.
ನಿರಂತರ 19 ಗಂಟೆಗಳ ಕಾಲ ಸಾಗಿದ ಗಣಪತಿಯ ಮೆರವಣಿಗೆಯಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪನವರೂ ಪಾಲ್ಗೊಂಡಿದ್ದು, ರಿಪ್ಪನ್‌ಪೇಟೆಯ ಗಣಪತಿ ಉತ್ಸವವನ್ನು ಮೆಚ್ಚಿ ಮಾತನಾಡಿದರು. ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಡಿಜೆ ಮ್ಯೂಸಿಕ್ಕಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದು ಈ ಬಾರಿಯ ವಿಶೇಷವಾಗಿತ್ತು.

ಕಾಮೆಂಟ್‌ಗಳಿಲ್ಲ