ಹೊಸನಗರ ಮೇಲಿನಬೆಸಿಗೆ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಬೃಹತ್ ಸೌಹಾರ್ದ ಸಂಗಮ ಸಮಾವೇಶ - ಲಿಂಗಭೇದ ತೊರೆದು ಶಿಕ್ಷಣಕ್ಕೆ ಮಾನ್ಯತೆ ನೀಡಿ : ಯು.ಟಿ.ಖಾದರ್
ಹೊಸನಗರ : ತಾಳ್ಮೆ ಪ್ರತಿಯೊಬ್ಬರ ಯಶಸ್ಸಿನ ಮೂಲ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.
ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಹಿಯುದ್ದೀನ್ ಜುಮ್ಮಾ ಮಸೀದಿ ಆವರಣದಲ್ಲಿ ಎಸ್‌ಎಸ್‌ಎಫ್, ಎಸ್‌ವೈಎಸ್ ಹಾಗೂ ಎಮ್‌ಜೆಎಮ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸೌಹಾರ್ದ ಸಂಗಮ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಬಾಲ್ಯದಿಂದಲೇ ಪ್ರತಿಯೊಬ್ಬರೂ ತಾಳ್ಮೆ, ಕ್ಷಮಾಗುಣ, ಅಗತ್ಯಕ್ಕೆ ತಕ್ಕಂತೆ ಮಾತನಾಡುವುದು, ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ನೀಡುವ ಗುಣವನ್ನು ರೂಢಿಸಿಕೊಂಡಲ್ಲಿ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಉತೃಷ್ಟಮಟ್ಟದಲ್ಲಿದ್ದು, ಜನಮನ್ನಣೆ ಗಳಿಸಲು ಸಾಧ್ಯವಿದೆ ಎಂದರು.
ಉತ್ತಮ ವ್ಯಕ್ತಿತ್ವ ಹೊಂದಿ ಪ್ರತಿಯೊಬ್ಬರನ್ನು ಪ್ರೀತಿಸುವ ವ್ಯಕ್ತಿಯನ್ನು ಅಲ್ಲಾಹಃ ಸಹ ಇಷ್ಟ ಪಡುತ್ತಾನೆ. ಉತ್ತಮ ಸಂಸ್ಕಾರ, ವ್ಯಕ್ತಿತ್ವ ಹೊಂದುವ ಯುವಜನತೆ ದೇಶದ ಹಾಗೂ ಕುಟುಂಬದ ಸಂಪತ್ತು ಎನ್ನುವ ಅಭಿಪ್ರಾಯವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
CLICK ಮಾಡಿ - ಹೊಸನಗರ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ದಿನದ ಯಶಸ್ವಿ ತರಬೇತಿ ಕಾರ್ಯಾಗಾರ
ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಬೇಕು. ಎಂತಹ ಕಠಿಣ ಸಮಸ್ಯೆಗಳೇ ಇರಲಿ, ಅದಕ್ಕೆ ಪರಿಹಾರ ಕಂಡು ಕೊಳ್ಳಲು ಶೈಕ್ಷಣಿಕ ಕ್ಷೇತ್ರದಿಂದ ಮಾತ್ರವೇ ಸಾಧ್ಯವೆಂದರು.
ಯಾವುದೇ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಗಳು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬಹುದೇ ವಿನಹಃ ಒಂದು ಕುಟುಂಬ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಅಂತಹ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಕುಟುಂಬದ ವಿದ್ಯಾವಂತ ಯುವಸಮೂಹದಿಂದ ಮಾತ್ರವೇ ಸಾಧ್ಯವೆಂದು ಹೇಳಿದ ಅವರು, ಲಿಂಗಭೇದ ತೊರೆದು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಕುಟುಂಬದಲ್ಲಿ ಶಾಂತಿ ಸೌರ್ಹಾದತೆ ನೆಲೆಸಿ ಉತ್ತಮ ನಾಗರೀಕರಾಗಲು ಶಿಕ್ಷಣ ಸಹಕಾರಿ ಆಗಲಿದೆ ಎಂದರು.
ರಿಪ್ಪನ್‌ಪೇಟೆಯ ಎಮ್‌ಜೆಎಮ್ ಖತೀಬರಾದ ಬಹು॥ ಮುನೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸುನ್ನೀ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಬಹು॥ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಮುಖ್ಯ ಭಾಷಣ ನೆರವೇರಿಸಿದರು.
ಜಯನಗರ ಎಮ್‌ಜೆಎಮ್ ಅಧ್ಯಕ್ಷ ಬಹು॥ ಅಬ್ದುಲ್ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಖತೀಬರಾದ ಬಹು॥ ಶಾಹುಲ್ ಹಮೀದ್ ಸಖಾಫಿ, ಬಹು॥ ಉಮರುಲ್ ಫಾರೂಕ್ ಸಖಾಫಿ, ಎಸ್‌ಎಸ್‌ಎಫ್ ಅಧ್ಯಕ್ಷ ನಾಸೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಬಹು॥ ಸಿದ್ದೀಖಾ ಹಾಜಿ, ಹೆಚ್. ಹಚಿಝ, ಮುಹಮ್ಮದ್ ಜೆ.ಎಂ. ಆಶ್ರಫ್ ಅಹ್ಮದ್, ಯಾಸೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ