Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮಾರ್ಚ್‌ 13ರಂದು ನಗರ, ನಿಟ್ಟೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ

ಹೊಸನಗರ : ತಾಲ್ಲೂಕಿನ ಅಂಡಗದೋದೂರು, ಮೂಡುಗೊಪ್ಪ, ಯಡೂರು, ಸುಳಗೋಡು, ಕರಿಮನೆ, ಖೈರಗುಂದ, ಅರಮನೆಕೊಪ್ಪ, ನಗರ ಮತ್ತು ನಿಟ್ಟೂರು ಗ್ರಾಮ ಪಂಚಾಯ್ತಿ ಪ್ರದೇಶಗಳಲ್ಲಿ ನಾಡಿದ್ದು ಅಂದರೆ ಮಾರ್ಚ್‌ 13ರಂದು ವಿದ್ಯುತ್‌ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

VIDEO - ಹೊಸನಗರ ಪೊಲೀಸ್ ಠಾಣಾ ಸಿಬ್ಬಂದಿ ಕೌಸಲ್ಯ ಅವರಿಂದ ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆ

ಮಾರ್ಚ್‌ 13ರ ಗುರುವಾರ ಹುಲಿಕಲ್‌ನ 110/11 ಕೆವಿ ಉಪವಿದ್ಯುತ್‌ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಈ ಭಾಗದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ, ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಮಂವಿಸಕಂ, ಪಾಲನೆ ಮತ್ತು ನಿರ್ವಹಣೆ ಹೊಸನಗರ ಉಪವಿಭಾಗದ ಸಹಾಯ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ