ಹೊಸನಗರ ಮಾರಿಕಾಂಬಾ ಜಾತ್ರೆಯಲ್ಲಿ ಮಹಿಳೆಯರ ಮನ ಸೂರೆಗೊಳ್ಳುತ್ತಿದೆ ಖಾದಿ ವಸ್ತ್ರ ವಿನ್ಯಾಸ ಮಳಿಗೆ
ಹೊಸನಗರ : ಈ ಬಾರಿಯ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ತೆರೆಯಲ್ಪಟ್ಟಿರುವ ಖಾದಿ ವಸ್ತ್ರ ವಿನ್ಯಾಸದ ಮಳಿಗೆ ವಿಶೇಷವಾಗಿದ್ದು, ಜಾತ್ರೆಗೆ ಬರುತ್ತಿರುವ ಮಹಿಳೆಯರನ್ನು ಆಕರ್ಷಿಸುತ್ತಿದೆ.
ಏಕ ಪೋಷಕರು, ವಿಧವೆಯರು ಹಾಗೂ ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಜೊತೆಗೂಡಿಸಿಕೊಂಡು ತಮ್ಮ ’ವಸ್ತ್ರ ವಿನ್ಯಾಸ ಕೇಂದ್ರ’ದ ಮೂಲಕ ಮಹಿಳಾ ಸಬಲೀಕರಣ ಹಾಗೂ ಗ್ರೋ ಇಂಡಿಯಾದ ಸಮಗ್ರ ಚಿತ್ರಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದೊಂದಿಗೆ ತಮ್ಮದೇ ಕೈ ಮಗ್ಗದಿಂದ ವಿವಿಧ ಬಗೆಯ ಸೀರೆಗಳು, ಸಲ್ವಾರ್ ಟಾಪ್, ಸೂಟ್ ಕೋಟ್, ಚಿತ್ತಾಕರ್ಷಕ ಕೌದಿಗಳುಳ್ಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ವ್ಯಾಪಾರಕ್ಕೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಮವಿನ್ ಮಿಸ್ ಇಂಡಿಯಾ ಪ್ಲಸ್ 2021 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸೀಮಾ ಸೆರಾವೋ ಉದ್ಘಾಟಿಸಿದರು.
ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಉದ್ಘಾಟನೆಯ ವೇಳೆ ಆಕಾಶವಾಣಿ, ದೂರದರ್ಶನ ಗಾಯನ ಕಲಾವಿದೆ ನೆಲ್ಲುಂಡೆ ಲಲಿತಾ, ಗೀತಾ ರಾಜೇಶ್, ಲಕ್ಷ್ಮೀ ಫ್ರ‍್ಯಾನ್ಸಿಸ್, ವಸ್ತ್ರ ವಿನ್ಯಾಸ ಖಾದಿ ಗ್ರಾಮೋದ್ಯೋಗ ಅಂಗಡಿ ಮಾಲೀಕ ರುದ್ರೇಶ್ ಇದ್ದರು.
ಕಾಮೆಂಟ್‌ಗಳಿಲ್ಲ