Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಾಳೆ ಹೊಸನಗರದಲ್ಲಿ ಸರ್ವಧರ್ಮ ಸೌಹಾರ್ದ ‌ಸೇವಾ ಟ್ರಸ್ಟ್‌ನ ಮೊದಲ ವರ್ಷದ ವಾರ್ಷಿಕೋತ್ಸವ

ಹೊಸನಗರ : ಪಟ್ಟಣದ ಶಿವಪ್ಪನಾಯಕ ರಸ್ತೆಯಲ್ಲಿನ ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಇಲ್ಲಿನ ಸಂತೆ ಮಾರ್ಕೆಟ್‌ ಕಟ್ಟಡದಲ್ಲಿ ನಾಳೆ ಸಂಜೆ ನಡೆಯಲಿದೆ.

ಜನವರಿ 5ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1-30 ರವರೆಗೆ ಉಡುಪಿಯ ಪ್ರಸಾದ್ ನೇತ್ರಾಲಯ ಇವರಿಂದ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು, ನಂತರ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

CLICK ಮಾಡಿ - ಕಾರಣಗಿರಿಯ ತೊಗರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸದಸ್ಯರಿಗೆ ಸಸಿ ವಿತರಣೆ

ರಾತ್ರಿ 7 ರಿಂದ 9 ಗಂಟೆಯವರೆಗೆ ನಾಗರಕೊಡಿಗೆ ಮಕ್ಕಳ ಯಕ್ಷಗಾನ ಕಲಾ ತಂಡದಿಂದ 'ಮಹಿಷಾಸುರ ಮರ್ದಿನಿ' ಯಕ್ಷ ಪ್ರಸಂಗ ನಡೆಯಲಿದೆ.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಟ್ರಸ್ಟ್‌‌ನ ಅಧ್ಯಕ್ಷ ತ್ರಿಣಿವೆ ಜಯರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟ್ರಸ್ಟ್‌‌ನ ಗೌರವಾಧ್ಯಕ್ಷ ವಾಸಪ್ಪ ಮಾಸ್ತಿಕಟ್ಟೆ, ಕುವೆಂಪು ವಿದ್ಯಾ ಸಂಸ್ಥೆಯ ಮುಖ್ಯಸ್ಥ ಡಾ. ಸೊನಲೆ ಶ್ರೀನಿವಾಸ್, ನಗರ ಸುಲ್ತಾನ್ ಜುಮ್ಮ ಮಸೀದಿಯ ಧರ್ಮಗುರು ಮಹಮದ್ ಸೈಮನ್ ಹಿಮಮಿ, ಹೊಸನಗರ ಸೈಂಟ್  ಅಂತೋನಿ ಚರ್ಚಿನ ಧರ್ಮಗುರು ಫಾದರ್ ಸೈಮನ್ ಹೊರ್ಟಾ, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ, ತಹಶೀಲ್ದಾರ್ ರಶ್ಮಿ, ಸಿಪಿಐ ಗುರಣ್ಣ ಎಸ್ ಹೆಬ್ಬಾಳ್, ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್. ಪ್ರವೀಣ್, ಎಸ್‌‌ಡಿಪಿಆರ್ ಯೋಜನಾಧಿಕಾರಿ ಪ್ರದೀಪ್ ಆರ್. ಹೆಗ್ಗಡೆ, ಮಾಸ್ತಿಕಟ್ಟೆ ಕೆಪಿಸಿ ವೈದ್ಯಾಧಿಕಾರಿ ಡಾ. ಪ್ರೀತಿ ಶೇಟ್, ರೈತ ಉತ್ಪಾದನಾ ಕೇಂದ್ರದ ಅಧ್ಯಕ್ಷ ಎನ್.ಆರ್. ದೇವಾನಂದ್, ಮೆಸ್ಕಾಂ ಎಇಇ ಚಂದ್ರಶೇಖರ್, ಎಸಿಎಫ್ ಮೋಹನ್ ಕುಮಾರ್, ಟ್ರಸ್ಟಿನ ಉಪಾಧ್ಯಕ್ಷರಾದ ಕೆ.ಆರ್. ಶೈಲಜಾ, ಆನೆಗದ್ದೆ ಆನಂದಗೌಡ, ಕಾರ್ಯದರ್ಶಿ ಮಾವಿನಕೊಪ್ಪ ಅಶೋಕ ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಟ್ರಸ್ಟಿನ ಅಧ್ಯಕ್ಷ ತ್ರಿಣಿವೆ ಜಯರಾಮ ಶೆಟ್ಟಿ ಕೋರಿದ್ದಾರೆ.


ಕಾಮೆಂಟ್‌ಗಳಿಲ್ಲ