Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಜಾಕ್‌ವೆಲ್‌ಗೆ ವಿದ್ಯುತ್ ಸರಬರಾಜಿನ ಎಬಿ ಕೇಬಲ್ ದುರಸ್ತಿಗೆ ಮೆಸ್ಕಾಂ ಎಸ್‌ಇ ಜಯದೇವಪ್ಪ ಸೂಚನೆ

ಹೊಸನಗರ : ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್‌ವೆಲ್‌ಗೆ ನಿರಂತರ ವಿದ್ಯುತ್ ಒದಗಿಸುವಂತೆ ಆಗ್ರಹಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ಸಾರ್ವಜನಿಕರನ್ನೊಳಗೊಂಡ ನಿಯೋಗವು ಶಿವಮೊಗ್ಗ ವಿಭಾಗದ ಮೆಸ್ಕಾಂನ ಸೂಪರಿಂಟೆಂಡೆಂಟ್ ಇಂಜಿನಿಯರ್ ಜಯದೇವಪ್ಪ ಅವರನ್ನು ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿತು.

ಕಳೆದ ಕೆಲವು ವರ್ಷಗಳ ಹಿಂದೆ ಜಾಕ್‌ವೆಲ್‌ಗೆ ಅಳವಡಿಸಿದ ಎಬಿ ಕೇಬಲ್ ಶಿಥಿಲಾವಸ್ಥೆಯಲ್ಲಿದೆ. ಪಂಚಾಯ್ತಿ ಸರಬರಾಜು ಮಾಡಿದ ಕೇಬಲ್ಲನ್ನು ಮೆಸ್ಕಾಂ ಅಳವಡಿಸಿತ್ತು. ಬಹಳ ಕಳಪೆ ಗುಣಮಟ್ಟದ ಕೇಬಲ್ ಅಳವಡಿಸಿದ ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿದ್ದು, ಇದೇ ಜನವರಿ 30ರಂದು ತಾಲ್ಲೂಕಿನ ಎಲ್ಲಾ ವಿದ್ಯುತ್ ಫೀಡರ್‌ಗಳ ಸಂಪರ್ಕ ತಪ್ಪಿಸಿ, ಕೇಂದ್ರ ಸ್ಥಾನದಲ್ಲಿ ದುರಸ್ತಿಗೆ ಮುಂದಾಗುವಂತೆ ಎಇಇ ಚಂದ್ರಶೇಖರ್, ವಿಭಾಗೀಯ ಅಧಿಕಾರಿ ಮಾಯಣ್ಣಗೌಡ ಅವರಿಗೆ ಸೂಚನೆ ನೀಡಿದರು.

ಕಳೆದ ಕೆಲವು ದಿನಗಳಿಂದ ಸಾಗರದ ಮೆಸ್ಕಾಂ ವಿಭಾಗದ ಅವಘಡದಿಂದಾಗಿ ಪಟ್ಟಣದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. 2-3 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಶೀಘ್ರದಲ್ಲೇ ಮಾರಿ ಜಾತ್ರೆ ಹಾಗೂ ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಬಿ ಕೇಬಲ್ ಬದಲಾವಣೆ ಕಾರ್ಯ ಶೀಘ್ರ ಮುಗಿಸಿ ಎಂದು ನಾಗರೀಕರು ಅಹವಾಲು ಸಲ್ಲಿಸಿದರು.

CLICK ಮಾಡಿ - ಹೊಸನಗರ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ - ನೂತನ ಕಚೇರಿ ಕಟ್ಟಡವನ್ನು ಹಳೇ ಗೀತಾ ಟಾಕೀಸ್ ಸ್ಥಳದಲ್ಲೇ ನಿರ್ಮಿಸಿ : ಸದಸ್ಯ ಅಶ್ವಿನಿ ಕುಮಾರ್ ಆಗ್ರಹ

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಅಶ್ವಿನಿಕುಮಾರ್, ಸಿಂಥಿಯಾ, ಆರ್. ಗುರುರಾಜ್, ಶಾಹಿನ, ನೇತ್ರಾಭಟ್, ನಿತ್ಯಾನಂದ್, ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ವಾಟರ್‌ಮ್ಯಾನ್ ಬಸವರಾಜ್, ನಾಸೀರ್, ವಸಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ