ಹೊಸನಗರ ಪೊಲೀಸ್ ಠಾಣೆಯಲ್ಲಿ ಹುತಾತ್ಮರ ದಿನ ಆಚರಣೆ
ಹೊಸನಗರ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇಂದು ಹುತಾತ್ಮರ ಗೌರವಾರ್ಥ ಮೌನಾಚರಣೆ ಮಾಡುವ ಮೂಲಕ ಎಎಸ್‌ಐ ಸತೀಶ್ ರಾಜ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ಹುತಾತ್ಮರ ದಿನವನ್ನು ಆಚರಿಸಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಎಎಸ್ಐ ನಿರಂಜನ್, ಎಎಸ್ಐ ರತ್ನಾಕರ್ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವಿಶ್ವಕ್ಕೆ ಸತ್ಯ ಮತ್ತು ಅಹಿಂಸಾ ಮಾರ್ಗ ತೋರಿದ ಹಾಗೂ ದೇಶಕ್ಕಾಗಿ ತಮ್ಮ ಪ್ರಾಣ ತೆತ್ತು ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಕನಸನ್ನು ನನಸಾಗಿಸಲು ಎಲ್ಲರೂ ಪಣ ತೊಡಬೇಕೆಂದರು.
ಹುತಾತ್ಮರ ದಿನವೆಂದರೆ ಕೇವಲ ಗಾಂಧೀಜಿಯವರಿಗಷ್ಟೇ ಸೀಮಿತವಾದ ದಿನವಲ್ಲ, ರಾಷ್ಟ್ರಕ್ಕಾಗಿ ಮಡಿದ ಎಲ್ಲ ದಿವ್ಯಾತ್ಮರ ಸೇವೆಯನ್ನು ಮಹಾತ್ಮ ಗಾಂಧೀಜಿ ಮಡಿದ ಜನವರಿ 30ರಂದು ಸ್ಮರಿಸುವ ದಿನವಾಗಿದೆ ಎಂದರು
ಕಾಮೆಂಟ್‌ಗಳಿಲ್ಲ