ಹೊಸನಗರದ ಪರಿಸರವಾದಿ ಗಿರೀಶ್ ಆಚಾರ್ ಅವರಿಗೆ ಒಲಿದು ಬಂತು ರಾಷ್ಟ್ರಮಟ್ಟದ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ - 2025 ಪ್ರಶಸ್ತಿ
ಹೊಸನಗರ : ತಾಲ್ಲೂಕಿನ ಪರಿಸರವಾದಿ, ಹೋರಾಟಗಾರರಾದ ಗಿರೀಶ್ ಆಚಾರ್ ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ದಿನಪತ್ರಿಕೆ ನೀಡುವ ’ಚೇಂಜ್ ಮೇಕರ್ಸ್ 2025’ ಪ್ರಶಸ್ತಿ ಲಭಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುವವರನ್ನು ಗುರುತಿಸಿ ಪ್ರತೀವರ್ಷ ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ದಿನಪತ್ರಿಕೆ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಪರಿಸರ ಉಳಿಸುವಲ್ಲಿ ಹೊಸನಗರದ ಗಿರೀಶ್ ಆಚಾರ್ ಅವರು ಮಾಡಿರುವ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಿರೀಶ್ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
CLICK ಮಾಡಿ - ಹೊಸನಗರ ಪೊಲೀಸ್ ಠಾಣೆಯಲ್ಲಿ ಹುತಾತ್ಮರ ದಿನ ಆಚರಣೆ
ಡ್ರೈವರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಗಿರೀಶ್ ಆಚಾರ್ ಅವರು ತಾಲ್ಲೂಕಿನಲ್ಲಿ ಅರಣ್ಯಭೂಮಿಯನ್ನು ಅತಿಕ್ರಮಿಸಿಕೊಳ್ಳುವವರ ವಿರುದ್ಧ, ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುವವರ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದು, ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇವರ ಈ ಸೇವೆಯನ್ನು ಗುರುತಿಸಿ ಡೆಕ್ಕನ್ ಹೆರಾಲ್ಡ್ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಪಡೆದಿರುವ ಗಿರೀಶ್ ಆಚಾರ್ ಅವರನ್ನು ತಾಲ್ಲೂಕಿನ ನಿಜ ಪರಿಸರವಾದಿಗಳು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳಿಲ್ಲ