Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಇದು ಲೇಖನಿಗೆ ಸಂದ ಗೌರವ : ಪತ್ರಕರ್ತ ನಾ.ರವಿ - ಮಂಡಿಬೆಲೆ ಶಾಮಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವಿ ಬಿದನೂರಿಗೆ ಸ್ಥಳೀಯ ಪತ್ರಕರ್ತರ ಅಭಿನಂದನೆ

ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) (ಕೆಯುಡಬ್ಲ್ಯುಜೆ) - 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದ ತಾಲ್ಲೂಕಿನ ಹಿರಿಯ ಪತ್ರಕರ್ತ ರವಿ ಬಿದನೂರು ಅವರನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾ.ರವಿ ಅವರ ನೇತೃತ್ವದಲ್ಲಿ ತಾಲ್ಲೂಕಿನ ಹಲವು ಪತ್ರಕರ್ತರು ಪ್ರಶಸ್ತಿ ಪುರಸ್ಕೃತರ ಸ್ವಗೃಹಕ್ಕೆ ತೆರಳಿ ನೆನಪಿನ ಕಾಣಿಕೆ ನೀಡಿ ಶಾಲು ಹೊದೆಸುವ ಮೂಲಕ ಅಭಿನಂದಿಸಿದರು.

ತಮ್ಮ ಲೇಖನಿಯ ಮೂಲಕ ಗ್ರಾಮೀಣ ಭಾಗದ ಹಲವು ಜನಪರ ಜ್ವಲಂತ ಸಮಸ್ಯೆಗಳ ಸೂಕ್ತ ಪರಿಹಾರಕ್ಕಾಗಿ ತಮ್ಮ ವಿಶಿಷ್ಟ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದ ಕಾರಣಕ್ಕೆ ಈ ಬಾರಿಯ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ರವಿ ಬಿದನೂರು ಭಾಜನರಾಗಿದ್ದರು.

ಈ ವೇಳೆ ಪತ್ರಕರ್ತ ನಾ. ರವಿ ಅವರು ಮಾತನಾಡಿ, ಸುಮಾರು 25 ವಸಂತಗಳ ನಿರಂತರ ಪತ್ರಿಕೋದ್ಯಮದಲ್ಲಿ ರವಿ ಬಿದನೂರು ನೀಡಿದ ಸೇವೆ ಅಪಾರ. ಹಲವು ಯುವ ಪತ್ರಕರ್ತರ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುವ ಜೊತೆಯಲ್ಲಿ ಪತ್ರಿಕೋದ್ಯಮ ತಿರುಳನ್ನು ಧಾರೆ ಎರೆದ  ಅವರ ಗುಣ ಈ ಸಾಧನೆಗೆ ಪ್ರೇರಣೆ. ಇದು ಲೇಖನಿಗೆ ಸಂದ ಬಹುದೊಡ್ಡ ಗೌರವ ಎಂದರು.

CLICK ಮಾಡಿ - ಹೊಸನಗರದಲ್ಲಿ ಕು.ಅನಿತಾ ಸರ್ವಾಧ್ಯಕ್ಷತೆಯಲ್ಲಿ ಯಶಸ್ವಿ ತಾಲ್ಲೂಕು ಮಟ್ಟದ 11ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

ಈಗಾಗಲೇ ಹಲವು ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಮತ್ತಷ್ಟು ಪ್ರಶಸ್ತಿಗಳ ಸರಮಾಲೆಯೇ ಒಲಿದು ಬರಲೆಂದು ಪತ್ರಕರ್ತೆ ಅಶ್ವಿನಿ ಪ್ರಭು ಶುಭ ಹಾರೈಸಿದರು. ಮನು ಸುರೇಶ್, ಶ್ರೀಕಂಠ ಈ ಸಂದರ್ಭದಲ್ಲಿ ಜೊತೆಗಿದ್ದರು.

ಪತ್ರಕರ್ತ ರವಿ ಬಿದನೂರು ಅವರಿಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ಪ್ರದಾನ

ಹೊಸನಗರ : ಇದೇ 2025ನೇ ಜನವರಿ 18-19 ರಂದು ತುಮಕೂರಿನಲ್ಲಿ ನಡೆದ 39ನೇ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದಲ್ಲಿ  ಗ್ರಾಮೀಣ ಭಾಗದ ಜನಪರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅತ್ಯುತ್ತಮ ವರದಿಗಾಗಿ ತಾಲ್ಲೂಕಿನ ಹಿರಿಯ ಪತ್ರಕರ್ತ ರವಿ ಬಿದನೂರು ಅವರಿಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಗೆ ಭಾಜನರಾದ ರವಿ ಬಿದನೂರು ಅವರ‌‌ ಈ ಸಾಧನೆಗೆ ಸಂಸದ ಬಿ. ವೈ.ರಾಘವೇಂದ್ರ. ಮಾಜಿ ಸಚಿವ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ ಗೌಡ, ಶಿಮೊಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅಭಿನಂದನೆ ತಿಳಿಸಿವೆ.

ಕಾಮೆಂಟ್‌ಗಳಿಲ್ಲ