ಹೊಸನಗರ ತಾಲ್ಲೂಕು ಕಸಾಪದಿಂದ ಶ್ರೀಮತಿ ದಾನಮ್ಮ ಶ್ರೀ ಬೊಮ್ಮನಾಯಕರು ಹಾಗೂ ಶ್ರೀಮತಿ ಸುಬ್ಬಲಕ್ಷ್ಮಮ್ಮ ಮತ್ತು ಶ್ರೀ ಸೀನಪ್ಪ ಶ್ರೇಷ್ಠಿ ದತ್ತಿ ನಿಧಿ ಕಾರ್ಯಕ್ರಮ
ಹೊಸನಗರ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇತ್ತೀಚೆಗೆ ಕಸಾಪ ಆವರಣದಲ್ಲಿ ಶ್ರೀಮತಿ ದಾನಮ್ಮ ಶ್ರೀ ಬೊಮ್ಮನಾಯಕರು ಹಾಗೂ ಶ್ರೀಮತಿ ಸುಬ್ಬಲಕ್ಷ್ಮಮ್ಮ ಮತ್ತು ಶ್ರೀ ಸೀನಪ್ಪ ಶ್ರೇಷ್ಠಿ ದತ್ತಿ ನಿಧಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ನಿವೃತ್ತ ಉಪನ್ಯಾಸಕರು ಹಾಗೂ ಪತ್ರಕರ್ತರೂ ಆದ ಕೆ. ಜಿ. ವೆಂಕಟೇಶ್ ದತ್ತಿನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊಸನಗರ ತಾಲ್ಲೂಕು ಸಾಹಿತಿಗಳ ಕೊಡುಗೆ ಒಂದು ಚಿಂತನೆ ಎಂಬ ವಿಷಯದ ಬಗ್ಗೆ ಮಾತನಾಡಿ, ತಾಲ್ಲೂಕಿನಲ್ಲಿರುವ ಹಿರಿಯ ಕಿರಿಯ ಸೇರಿದಂತೆ ಎಲ್ಲಾ ಸಾಹಿತಿಗಳ ಮಾಹಿತಿಯನ್ನು ಸವಿಸ್ತಾರವಾಗಿ ನೀಡಿದರು.
ಬೆಂಗಳೂರು ಕನಕಪುರದ ನಿವೃತ್ತ ಸಹ ಪ್ರಾಧ್ಯಾಪಕರಾದ ಡಿ. ಎಸ್. ನಾಗರಾಜ್, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ವಿಶ್ಲೇಷಿಸಿ, ಇತಿಹಾಸ ವಿಜ್ಞಾನ ಸಾಹಿತ್ಯವಾಗುವುದಿಲ್ಲ. ಸಾಹಿತಿಯಾದವರು ಇದಕ್ಕೆ ಇತಿಹಾಸದಲ್ಲಿ ಬಂದು ಹೋದ ನಾಯಕನ ಮನಸ್ಸಿನ ತಳಮಳ ಸಂವೇದನೆ ಮತ್ತು ಸೃಜನಶೀಲತೆಗಳಿಗೆ ಜೀವ ನೀಡಿ ಅದನ್ನು ಅಪ್ಪಟ ಸಾಹಿತ್ಯವಾಗಿಸುತ್ತಾನೆ ಎಂದು ಹೇಳಿದರು.
ಕೆ. ಕೆ. ಅಶ್ವಿನಿ ಕುಮಾರ್ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಗಣೇಶ್ ಮೂರ್ತಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕುಬೇಂದ್ರಪ್ಪ ಪ್ರಾರ್ಥಿಸಿದರು. ಶಂಕ್ರಪ್ಪ ಸ್ವಾಗತಿಸಿ, ಶ್ರೀಮತಿ ಅಶ್ವಿನಿ ಪಂಡಿತ್ ನಿರೂಪಿಸಿದರು. ಪ್ರವೀಣ್ ಎಂ ಕಾರ್ಗಡಿ ವಂದಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಕೆ. ಜಿ. ವೆಂಕಟೇಶ್, ಕೆ. ಜಿ. ನಾಗೇಶ್, ಪ್ರಶಾಂತ್, ಶ್ರೀಕಂಠ, ಸದಾನಂದ, ಹೆಚ್. ಎಸ್. ನಾಗರಾಜ ಮತ್ತು ಅಶ್ವಿನಿ ಪಂಡಿತ್, ಮನು, ಸುರೇಶ್ ಅವರಿಗೆ ಕಸಾಪ ಪರವಾಗಿ ಸನ್ಮಾನಿಸಲಾಯಿತು.
ಡಾ. ಮಾರ್ಷಲ್ ಶರಾಂ, ಹುಂಚ ಹೋಬಳಿ ಘಟಕದ ಕಸಾಪ ಅಧ್ಯಕ್ಷರಾದ ಬಷೀರ್ ಅಹಮದ್, ವೇಣುಗೋಪಾಲ್, ಲಿಂಗಮೂರ್ತಿಗಳು, ಚಂದ್ರಶೇಖರ ಶೇಟ್, ಗುರುದೇವ್ ಭಂಡಾರ್ಕರ್ ಸೇರಿದಂತೆ ಅನೇಕ ಸಾಹಿತ್ಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ