ನಿಟ್ಟೂರು ಮರಕುಟಿಗ ಕ್ರಾಸ್ ಬಳಿ ಜೀಪ್ ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಪಘಾತ
ಹೊಸನಗರ : ತಾಲ್ಲೂಕಿನ ನಿಟ್ಟೂರು ಸಮೀಪದ ಮರಕುಟಿಗ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಜೀಪಿಗೆ ಟೆಂಪೋ ಟ್ರಾವೆಲರ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಜೀಪಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಟೆಂಪೋ ಟ್ರಾವೆಲರ್ ಕೊಲ್ಲೂರಿನಿಂದ ಶಿವಮೊಗ್ಗದ ಕಡೆ ತೆರಳುತ್ತಿದ್ದು, ಜೀಪು ನಿಟ್ಟೂರಿನಿಂದ ಕೊಲ್ಲೂರು ಕಡೆ ಸಾಗುತ್ತಿತ್ತು. ಮರಕುಟಿಗದ ತಿರುವೊಂದರ ಬಳಿ ಪ್ರಯಾಣಿಕರಿಗೆ ವಾಂತಿ ಆಗುತ್ತಿದ್ದರಿಂದ ಜೀಪನ್ನು ರಸ್ತೆ ಬದಿಗೆ ನಿಲ್ಲಿಸಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಟಿಟಿ ಢಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
CLICK ಮಾಡಿ - ಹೊಸನಗರ ಚಾಮುಂಡೇಶ್ವರಿ ಕಾಫಿ ವರ್ಕ್ಸ್‌ನ ನಟರಾಜ್ ಇನ್ನಿಲ್ಲ
ಅಪಘಾತದಿಂದಾಗಿ ಎರಡೂ ವಾಹನಗಳ ಮುಂಭಾಗ ಜಖಂ ಆಗಿದ್ದು, ಸಣ್ಣಪುಟ್ಟ ಗಾಯಗಳಾದ 6 ಮಂದಿಯನ್ನು ಕುಂದಾಪುರದ ಆಸ್ಪತ್ರೆಗೆ ರವಾನಿಸಲಾಗಿದೆ. ಜೀಪಿನಲ್ಲಿ 6 ಜನರಿದ್ದರೆ, ಟಿಟಿಯಲ್ಲಿ 13 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ.
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ